ಹುಂಜದ ಕೂಗಿನಿಂದ ತೊಂದರೆಯಾಗ್ತಿದೆ ಎಂದು ದೂರು ನೀಡಿದ ಪಕ್ಕದ ಮನೆಯ ನಿವಾಸಿ!
ಬೆಂಗಳೂರು: ಪಕ್ಕದ ಮನೆಯವರ ಕೋಳಿ, ಬಾತುಕೋಳಿಗಳ ಕೂಗಿನಿಂದಾಗಿ ನಮಗೆ ತೊಂದರೆಯಾಗುತ್ತಿದೆ ಎಂದು ಎದುರು ಮನೆಯ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನೆಮೊ ಎಂಬ ಹೆಸರಿನ ಟ್ವಿಟ್ಟರ್ ಮೂಲಕ ಹುಂಜ ಕೂಗುವ ವಿಡಿಯೋ ಹಂಚಿಕೊಂಡು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಲಾಗಿದ್ದು, ಜನವಸತಿ ಪ್ರದೇಶದಲ್ಲಿ ಹಗಲು ರಾತ್ರಿ ಎನ್ನದೇ ಕೋಳಿಗಳು ಕೂಗುತ್ತಿವೆ. ಸ್ವಲ್ಪ ಸಮಯದ ವರೆಗೂ ಇದು ನಿಂತು ಹೋಗಿತ್ತು. ಆದರೆ, ಇದೀಗ ಮತ್ತೆ ಶುರುವಾಗಿದೆ ದಯಮಾಡಿ ಕ್ರಮಕೈಗೊಳ್ಳಿ ಹುಂಜಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಎಂದು ಟ್ವಿಟ್ಟರ್ ನಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
ನಮ್ಮ ಮನವಿಗೆ ಅವರು ಕಿವಿಕೊಡುತ್ತಿಲ್ಲ, ಮನೆ ಮಾಲಿಕರು ನಮ್ಮ ನೆರೆಹೊರೆಯಲ್ಲಿಯೇ ಕೋಳಿ ಮತ್ತು ಬಾತುಕೋಳಿಗಳ ಫಾರ್ಮ್ ನಡೆಸುತ್ತಿದ್ದಾರೆ, ಹುಂಜಗಳ ಕೂಗಿನಿಂದಾಗಿ ಹಗಲು ರಾತ್ರಿ ತೊಂದರೆಯಾಗುತ್ತಿದೆ, ನಮ್ಮ 2 ತಿಂಗಳ ಪುಟ್ಟ ಮಗು ಇದರಿಂದ ಮಲಗಲು ಸಾಧ್ಯವಾಗುತ್ತಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw