ಮುಸ್ಲಿಂ ಮಹಿಳೆಯರ ಅಶ್ಲೀಲ ಚಿತ್ರಗಳನ್ನು ಎಐ ಮೂಲಕ ನಿರ್ಮಿಸಿ‌ ಶೇರ್: ವ್ಯಾಪಕ ಆಕ್ರೋಶ - Mahanayaka

ಮುಸ್ಲಿಂ ಮಹಿಳೆಯರ ಅಶ್ಲೀಲ ಚಿತ್ರಗಳನ್ನು ಎಐ ಮೂಲಕ ನಿರ್ಮಿಸಿ‌ ಶೇರ್: ವ್ಯಾಪಕ ಆಕ್ರೋಶ

11/03/2025


Provided by

ಈ ಮೊದಲು ಸುಲ್ಲಿ ಡೀಲ್ಸ್ ಎಂಬ ಹೆಸರಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಪ್ರಚೋದನಕಾರಿ ಪೋಸ್ಟ್ ಗಳನ್ನು ಹಂಚಿಕೊಂಡದ್ದು ಮತ್ತು ಅದರ ವಿರುದ್ಧ ಕ್ರಮ ಕೈಗೊಳ್ಳಲಾದದ್ದು ನಿಮಗೆ ಗೊತ್ತಿರಬಹುದು. ಇದೀಗ ಮುಸ್ಲಿಂ ಮಹಿಳೆಯರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷವನ್ನು ಬಿತ್ತುವ ಅಂತಹದ್ದೇ ಪ್ರಯತ್ನ ನಡೆಸಲಾಗಿದೆ. ಮುಸ್ಲಿಂ ಮಹಿಳೆಯರ ಅಶ್ಲೀಲ ಚಿತ್ರಗಳನ್ನು ಎಐ ಮೂಲಕ ನಿರ್ಮಿಸಿ ಹಂಚಲಾಗುತ್ತಿದೆ.


Provided by

ಸುಲ್ಲಿ ಡೀಲ್ಸ್ ನಿಂದ ಸಂತ್ರಸ್ತರಾದವರಿಗೂ ಈ ಚಿತ್ರಗಳನ್ನು ಕಳುಹಿಸಲಾಗುತ್ತಿದೆ ಎಂದು ವರದಿಯಾಗಿದೆ. ಹಿಜಾಬ್ ಧರಿಸಿದ ಮಹಿಳೆಯರನ್ನು ಹಿಂದೂ ಪುರುಷರೊಂದಿಗೆ ಅಶ್ಲೀಲವಾಗಿ ತೋರಿಸುವ ಚಿತ್ರಗಳು ಇವಾಗಿದ್ದು ಇದರ ಜೊತೆಗೇ ಬೆದರಿಕೆಯ ಆಡಿ ಟಿಪ್ಪಣಿಗಳನ್ನು ಕೂಡ ಹಾಕಲಾಗಿದೆ

ಈ ಚಿತ್ರಗಳ ಹಿಂದೆ ಸಂಚು ಅಡಗಿದ್ದು ಬಲಪಂಥೀಯ ಶಕ್ತಿಗಳು ಯೋಜಿತವಾಗಿ ಇಂತಹ ಕುತಂತ್ರಕ್ಕೆ ಇಳಿದಿವೆ ಎಂದು ಆಕ್ಟಿವಿಸ್ಟ್ ನಾಬಿಯ ಖಾನ್ ಹೇಳಿದ್ದಾರೆ.


Provided by

ಇಂತಹ ಚಿತ್ರಗಳನ್ನು ನನಗೂ ಕಳಿಸಿಕೊಡಲಾಗಿದೆ. ನಾನು ಇದರಿಂದ ತೀವ್ರ ಆತಂಕಿತಳಾಗಿದ್ದೇನೆ. ಇದು ಕೇವಲ ಟ್ರೋಲ್ ಅಲ್ಲ. ಮುಸ್ಲಿಮರ ವಿರುದ್ಧದ ದ್ವೇಷ ಪ್ರಚಾರದ ಭಾಗವಾಗಿಯೇ ಇದನ್ನು ತಯಾರಿಸಲಾಗಿದೆ. ಅಧಿಕಾರಿಗಳ ಎದುರು ಸತ್ಯ ಹೇಳುವ ಮಹಿಳೆಯರನ್ನು ಬೆದರಿಸುವುದೇ ಇದರ ಉದ್ದೇಶ ಎಂದವರು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ