ರಸ್ತೆಗೆ ತುಂಡಾಗಿ ಬಿದ್ದ ಪವರ್ ಲೈನ್: ಹಸು ಸಾವು, ಸ್ವಲ್ಪದರಲ್ಲೇ ಪಾರಾದ ಜನ - Mahanayaka

ರಸ್ತೆಗೆ ತುಂಡಾಗಿ ಬಿದ್ದ ಪವರ್ ಲೈನ್: ಹಸು ಸಾವು, ಸ್ವಲ್ಪದರಲ್ಲೇ ಪಾರಾದ ಜನ

power line
22/04/2024

ಕೊಟ್ಟಿಗೆಹಾರ: ನಿನ್ನೆ ಸುರಿದ ಭಾರೀ ಗಾಳಿ ಮಳೆಗೆ ಪವರ್ ಲೈನ್ ಮೇಲೆ ಮರ ಬಿದ್ದಿದ್ದು, ಈ ಪವರ್ ಲೈನ್ ಸ್ಪರ್ಶಿಸಿ ಹಸುವೊಂದು ಸಾವನ್ನಪ್ಪಿರುವ ಘಟನೆ ಬಿ.ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.

ಬಿ.ಹೊಸಳ್ಳಿ ಗ್ರಾಮದ ಗಣಪ ಎಂಬವರಿಗೆ ಸೇರಿದ ಹಸು ಸಾವನ್ನಪ್ಪಿದ ಹಸುವಾಗಿದೆ. ಭಾನುವಾರ ಸಂಜೆ ಸುರಿದ ಭಾರೀ ಮಳೆಗೆ ಬಿ.ಹೊಸಳ್ಳಿ ಗ್ರಾಮದಲ್ಲಿ ಬೃಹತಾಕಾರದ ಮರ ಒಂದು ಪವರ್ ಲೈನ್ ಮೇಲೆ ಬಿದ್ದು ವಿದ್ಯುತ್ ತಂತಿ ನೆಲಕ್ಕೆ ಬಿದ್ದಿತ್ತು.  ಅದನ್ನು ತುಳಿದ ಹಸು ಸಾವನ್ನಪ್ಪಿದೆ.

ಘಟನೆ ವೇಳೆ ಜನರು ಯಾರು ಕೂಡ ಈ ರಸ್ತೆಯಲ್ಲಿ ಹೋಗದೇ ಇರುವುದರಿಂದ ಅಪಾಯ ತಪ್ಪಿದೆ.  ಸಾರ್ವಜನಿಕರು ಈ ರಸ್ತೆಯಲ್ಲಿ ಹೋಗುತ್ತಿದ್ದರೆ ಭಾರೀ ಅಪಾಯ ಸಂಭವಿಸುವ ಸಾಧ್ಯತೆ ಇತ್ತು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ