ಸೆಲ್ಫಿ ತೆಗೆಯುತ್ತಿದ್ದ ವೇಳೆ ಅವಘಡ: ಪ್ರೇಮಿಗಳಿಬ್ಬರು ನೀರುಪಾಲು! - Mahanayaka

ಸೆಲ್ಫಿ ತೆಗೆಯುತ್ತಿದ್ದ ವೇಳೆ ಅವಘಡ: ಪ್ರೇಮಿಗಳಿಬ್ಬರು ನೀರುಪಾಲು!

drown water
12/04/2021

ಕಾರವಾರ: ಕಾಳಿ ನದಿಯಲ್ಲಿ ಸೆಲ್ಫಿ ತೆಗೆಯಲು ಹೋಗಿ  ಪ್ರೇಮಿಗಳು ನಾಪತ್ತೆಯಾಗಿರುವ ಘಟನೆ ಜೋಯಿಡಾ ತಾಲೂಕಿನ ಗಣೇಶಗುಡಿ ಬಳಿಯ ಸೂಪಾ ಡ್ಯಾಂನ ಕಾಳಿ ಸೇತುವೆ ಬಳಿಯಲ್ಲಿ ಇಂದು ಸಂಜೆ ನಡೆದಿದೆ.

ಇಂದು ಸಂಜೆ ಗಣೇಶಗುಡಿಯ ಡ್ಯಾಂ ಭಾಗದಲ್ಲಿ ದಾಂಡೇಲಿಯಿಂದ ಆಟೋದಲ್ಲಿ ಬಂದು ಗಣೇಶಗುಡಿಯ ಸೂಫಾ ಡ್ಯಾಂಗೆ ಭೇಟಿ ನೀಡಿದ್ದ ಪ್ರೇಮಿಗಳು, ಡ್ಯಾಮ್ ಎದುರಿನಲ್ಲಿರುವ ಸೇತುವೆಯ ಕಟ್ಟೆಯ ಮೇಲೆ ಸೆಲ್ಫಿ ತೆಗೆಯುತ್ತಿದ್ದರು ಎಂದು ತಿಳಿದು ಬಂದಿದೆ.

ಸೆಲ್ಫಿ ತೆಗೆಯುವ ವೇಳೆ ಕಾಲು ಜಾರಿ ಕಾಳಿ ನದಿಗೆ ಬಿದ್ದು ಜೋಡಿ ನಾಪತ್ತೆಯಾಗಿದ್ದಾರೆ. ನೀರು ಪಾಲಾದವರ ಪೈಕಿ ಯುವತಿ ಬೀದರ್ ಮೂಲದವಳಾಗಿದ್ದು, ಆಕೆಯ ಹೆಸರು ರಕ್ಷಿತಾ ಎಂದು ತಿಳಿದು ಬಂದಿದೆ. ಯುವಕನ ಬಗ್ಗೆ ಇನ್ನೂ ತಿಳಿದು ಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ