ಕರ್ನಾಟಕ ಫಲಿತಾಂಶದ ಹಿನ್ನೆಲೆ ದೇವರಿಗೆ ಪ್ರಿಯಾಂಕಾ ಗಾಂಧಿ ವಿಶೇಷ ಪ್ರಾರ್ಥನೆ! - Mahanayaka
2:27 AM Wednesday 10 - September 2025

ಕರ್ನಾಟಕ ಫಲಿತಾಂಶದ ಹಿನ್ನೆಲೆ ದೇವರಿಗೆ ಪ್ರಿಯಾಂಕಾ ಗಾಂಧಿ ವಿಶೇಷ ಪ್ರಾರ್ಥನೆ!

priyankagandhi
13/05/2023

ಶಿಮ್ಲಾ: ಕರ್ನಾಟಕ ವಿಧಾನ ಸಭಾ ಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕಿ, ಎಐಸಿಸಿ ಪ್ರಧಾನಿ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಶಿಮ್ಲಾದ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.


Provided by

ಶಿಮ್ಲಾದ ಜಖುವಿನ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಿಯಾಂಕಾ ದೇಶ ಮತ್ತು ಕರ್ನಾಟಕದ ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದರು ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ಬೆಳಿಗ್ಗೆ 8 ಗಂಟೆಯಿಂದ ರಾಜ್ಯದಲ್ಲಿ ಮತ ಎಣಿಕೆ ಶುರುವಾಗಿದ್ದು, ಕಾಂಗ್ರೆಸ್ ಆರಂಭಿಕ ಮುನ್ನಡೆ ಸಾಧಿಸಿದೆ. ಕೇವಲ ಒಂದೇ ಗಂಟೆಯಲ್ಲಿ ಮ್ಯಾಜಿಕ್​ ನಂಬರ್​ನ ಅರ್ಧ ಪ್ರತಿಶತ ಗಡಿಯನ್ನು ದಾಟಿತು. ಅಧಿಕಾರದಲ್ಲಿರುವ ಬಿಜೆಪಿ ಸದ್ಯದ ಮಟ್ಟಿಗೆ ಹಿನ್ನಡೆ ಅನುಭವಿಸಿದೆ.

ಇನ್ನೂ ಕಾಂಗ್ರೆಸ್ 130ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ  ಎಂದು ಕಾಂಗ್ರೆಸ್ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್​ ಗೆಲುವು ಸಾಧಿಸಲಿದ್ದು, ಬಹುಮತ ಬಂದು ಸರ್ಕಾರ ರಚಿಸಲಿದೆ ಎನ್ನಲಾಗುತ್ತಿದೆ. ಸಂಜೆಯೊಳಗೆ ಸಂಪೂರ್ಣ ಚಿತ್ರಣ ಸಿಗಲಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ