ಮಾನಸಿಕ ಅಸ್ವಸ್ಥ ಯುವಕನ ರಕ್ಷಣೆ: ಪುನರ್ವಸತಿ ಒದಗಿಸಿದ ಸ್ನೇಹಾಲಯ - Mahanayaka
12:23 AM Sunday 15 - December 2024

ಮಾನಸಿಕ ಅಸ್ವಸ್ಥ ಯುವಕನ ರಕ್ಷಣೆ: ಪುನರ್ವಸತಿ ಒದಗಿಸಿದ ಸ್ನೇಹಾಲಯ

snehalaya
17/11/2022

ಉಡುಪಿ: ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ ಬದಿ ರಾತ್ರಿಯಿಂದ ಬೆಳಗಿನವರೆಗೆ ಅಸಹಾಯಕನಾಗಿ ರೋಧಿಸುತ್ತಿದ್ದ ಮಾನಸಿಕ ಅಸ್ವಸ್ಥ ಯುವಕನನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ ಘಟನೆ ನ.15 ರಂದು ನಡೆದಿದೆ.

ರಕ್ಷಣೆಗೊಳಪಟ್ಟ ಯುವಕ ಹೊರ ರಾಜ್ಯದವರಾಗಿದ್ದು ಸುಮಾರು 20-22 ವರ್ಷದವನಾಗಿರುತ್ತಾನೆ. ಯುವಕ ದೈಹಿಕವಾಗಿ ಬಹಳಷ್ಟು ಬಳಲಿದ್ದಾನೆ. ಈತ ಬೀದಿಪಾಲಾಗಿ ಕೆಲವು ವರ್ಷಗಳೇ ಆಗಿರಬಹುದು.

ರಕ್ಷಿಸಿದ ವಿಶು ಶೆಟ್ಟಿ ವಿನಂತಿಗೆ ಮಂಜೇಶ್ವರದ ಸ್ನೇಹಾಲಯ ಆಶ್ರಮದ ಮುಖ್ಯಸ್ಥರಾದ ಜೋಸೆಫ್ ಕ್ರಾಸ್ತ ಪುನರ್ವಸತಿ ಹಾಗೂ ಚಿಕಿತ್ಸೆಗೆ ಸ್ಪಂದಿಸಿದ್ದು ವಿಶು ಶೆಟ್ಟಿ ಖಾಸಗಿ ಆಂಬುಲೆನ್ಸ್ ನಲ್ಲಿ ಯುವಕನನ್ನು ಕೇರಳದ ಮಂಜೇಶ್ವರ ಆಶ್ರಮಕ್ಕೆ ದಾಖಲಿಸಿ ಯುವಕನ ಭವಿಷ್ಯತ್ತಿನ ಬಾಳಿಗೆ ಹಾಗೂ ಸಮಾಜದಲ್ಲಿ ಆಗಬಹುದಾದ ಸಂಭಾವ್ಯ ದುರಂತ ತಪ್ಪಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ