ಅಪಘಾತಕ್ಕೆ ಕಾರಣವಾಗುತ್ತಿರುವ ದನಗಳು!: ಬಿಡಾಡಿ ದನಗಳ ಹಾವಳಿಗೆ ಸಾರ್ವಜನಿಕರು ಸುಸ್ತು!
ಕೊಟ್ಟಿಗೆಹಾರ : ಬಣಕಲ್, ಕೊಟ್ಟಿಗೆಹಾರ ಪಟ್ಟಣಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಸವಾರರು, ವರ್ತಕರು ತೊಂದರೆ ಅನುಭವಿಸುವಂತಾಗಿದೆ.
ಬಣಕಲ್, ಕೊಟ್ಟಿಗೆಹಾರ ಸುತ್ತಮುತ್ತ 50ಕ್ಕೂ ಅಧಿಕ ಬಿಡಾಡಿ ದನಗಳು ಬಸ್ ನಿಲ್ದಾಣ, ರಸ್ತೆ, ಅಂಗಡಿಗಳ ಮುಂದೆ ಮುಂತಾದ ಕಡೆಗಳಲ್ಲಿ ಬೇಕಾಬಿಟ್ಟಿ ಓಡಾಡಿಕೊಂಡಿರುತ್ತವೆ. ಹಗಲು ವೇಳೆಯಲ್ಲಿ ರಸ್ತೆಯಲ್ಲಿ ಸಾಲುಗಟ್ಟಿ ಮಲಗುವ ಬಿಡಾಡಿ ದನಗಳು ರಾತ್ರಿಯಿದ್ದಂತೆ ಆಟೋ ನಿಲ್ದಾಣ, ಅಂಗಡಿ ಮುಂಗಟ್ಟುಗಳ ಮುಂದೆ ಸಗಣಿ,ಗಂಜಲವನ್ನು ಹಾಕಿ ಪರಿಸರ ಕಲುಷಿತಗೊಳಿಸುತ್ತವೆ.
ವರ್ತಕರಿಗಂತೂ ಬೆಳಿಗ್ಗೆ ಅಂಗಡಿ ತೆರೆಯಲು ದನಗಳ ಗಂಜಲ, ಸಗಣಿ ಎತ್ತುವುದೇ ದಿನ ನಿತ್ಯದ ಕಾಯಕವಾಗಿದೆ. ಇಲ್ಲಿ ಮಲಗುವ ದನಗಳಿಗೆ ಮಾಲೀಕರಿದ್ದು ಕೂಡ ಅವುಗಳನ್ನೇ ಕಟ್ಟಿ ಹಾಕದೇ ಬಿಡುವುದರಿಂದ ಇವು ಬಿಡಾಡಿ ದನಗಳಂತೆ ಆಗಿವೆ. ದನಗಳನ್ನು ಮಾಲೀಕರು ಕಟ್ಟುವ ಬಗ್ಗೆ ಗ್ರಾಮ ಪಂಚಾಯಿತಿ, ಪೊಲೀಸರು ಹಲವು ಬಾರಿ ಸಭೆಗಳನ್ನು ನಡೆಸಿ ಸೂಚಿಸಿದ್ದರೂ ಯಾವುದೇ ಪ್ರಯೋಜನವಾಗದೇ ದನಗಳ ಕಾಟ ತೀರಾ ಹೆಚ್ಚಾಗಿದೆ. ಇದಲ್ಲದೇ ವಾಹನ ಸಂಚರಿಸುವ ವೇಳೆ ದನಗಳು ಗುಂಪಾಗಿ ರಸ್ತೆಯಲ್ಲಿ ಮಲಗಿ ಅನೇಕ ಅಪಘಾತಗಳು ಸಂಭವಿಸುತ್ತಿವೆ. ವಾಹನಗಳು ಬರುವಾಗ ದನಗಳು ಆ ಕಡೆ ಓಡಾಡುವುದರಿಂದ ವಾಹನಗಳಿಗೆ ಅವು ತಾಗಿ ವಾಹನಕ್ಕೂ ಹಾನಿಯಾಗುತ್ತಿದೆ.
ಸಂಬಂಧಿಸಿದ ಅಧಿಕಾರಿಗಳು ಇನ್ನಾದರೂ ದನಗಳ ಮಾಲೀಕರನ್ನು ಪತ್ತೆ ಸೂಕ್ತ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
“ಬಿಡಾಡಿ ದನಗಳ ಕಿವಿಗಳಿಗೆ ಗುರುತು ಹಚ್ಚಲು ಪಶು ವೈದ್ಯ ಇಲಾಖೆಯವರು ಬಿಲ್ಲೆಗಳನ್ನು ಹಾಕಿದ್ದಾರೆ. ಅದರಲ್ಲಿ ಮಾಲೀಕರ ವಿವರ ಇರುತ್ತದೆ. ಇದರಿಂದ ಬಿಡಾಡಿ ದನಗಳ ಮಾಲೀಕರ ಗುರುತು ಪತ್ತೆಯಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ವಹಿಸಬೇಕು’.
–ಬಿ.ಸಿ.ಪ್ರವೀಣ್, ಮುಖಂಡರು, ಬಣಕಲ್.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: