ಪುತ್ತೂರಿನಿಂದ ಜೀರೋ ಟ್ರಾಫಿಕ್ ನಲ್ಲಿ ಬೆಂಗಳೂರಿಗೆ ಸಾಗಿದ ಆಂಬುಲೆನ್ಸ್ - Mahanayaka
1:18 AM Wednesday 17 - September 2025

ಪುತ್ತೂರಿನಿಂದ ಜೀರೋ ಟ್ರಾಫಿಕ್ ನಲ್ಲಿ ಬೆಂಗಳೂರಿಗೆ ಸಾಗಿದ ಆಂಬುಲೆನ್ಸ್

02/12/2020




Provided by

ಪುತ್ತೂರು: ಶ್ವಾಸಕೋಶದ  ಸಮಸ್ಯೆಯಿಂದ ಬಳಲುತ್ತಿದ್ದ ಯುವತಿಯನ್ನು ಹೆಚ್ಚಿನ  ಚಿಕಿತ್ಸೆಗಾಗಿ ಜಿರೋ  ಟ್ರಾಫಿಕ್  ಮೂಲಕ  ಆಂಬುಲೆನ್ಸ್ನಲ್ಲಿ ಪುತ್ತೂರಿನಿಂದ  ಬೆಂಗಳೂರಿನ  ಆಸ್ಸತ್ರೆಗೆ   ತಲುಪಿಸಲಾಯಿತು.

 ಶ್ವಾಸಕೋಶದ ಸಮಸ್ಯೆಯಿಂದ  ಬಳಲುತಿದ್ದಸುಹಾನ (22) ಎಂಬ ಯುವತಿಯನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಯಿಂದ ಉಪ್ಪಿನಂಗಡಿ- ಗುರುವಾಯನಕೆರೆ- ಉಜಿರೆ- ಚಾರ್ಮಾಡಿ ಘಾಟಿ ಮೂಲಕ ಒಂದೂವರೆ ಗಂಟೆಯಲ್ಲಿ ಮೂಡಿಗೆರೆ ಹ್ಯಾಂಡ್ ಪೋಸ್ಟ್ ತಲುಪಿಸಿ, ಅಲ್ಲಿಂದ ಬೇಲೂರು ಮೂಲಕ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ವೈದೇಹಿ ಆಸ್ಪತ್ರೆಗೆ ತಲುಪಿಸಲಾಗಿದೆ.

ಸ್ಥಳೀಯರು ಹಾಗೂ ಪೊಲೀಸರ ಸಹಕಾರದೊಂದಿಗೆ ಆಂಬುಲೆನ್ಸ್ ಚಾಲಕ ಹನೀಫ್ ಅವರು ಸಾಹಸ ಮೆರೆದು ಯುವತಿಯನ್ನು ಆಸ್ಪತ್ರೆಗೆ ತಲುಪಿಸಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಯಾವುದೇ ವ್ಯಕ್ತಿಯ ಪ್ರಾಣ ಬಹಳ ಮುಖ್ಯ. ಅದನ್ನು ಉಳಿಸುವುದೇ ಮಾನವೀಯತೆ. ಸಾರ್ವಜನಿಕರ, ಸ್ನೇಹಿತರ ಸಹಕಾರದಿಂದ ಅತಿ ಕಡಿಮೆ ಅವದಿಯಲ್ಲಿ ರೋಗಿಯನ್ನು ಬೆಂಗಳೂರು ಆಸ್ಪತ್ರೆಗೆ ಸೇರಿಸಲು ಸಾಧ್ಯವಾಯಿತು ಎಂದು ಇದೇ ಸಂದರ್ಭದಲ್ಲಿ ಹನೀಫ್ ಮಾಧ್ಯಮಗಳಿಗೆ ತಿಳಿಸಿದರು.

ಇತ್ತೀಚಿನ ಸುದ್ದಿ