ವಿಮಾನ ನಿಲ್ದಾಣದ ಆವರಣದ ಪೈಪ್ ನಲ್ಲಿ ಅಡಗಿ ಕುಳಿತ ಚಿರತೆ! - Mahanayaka

ವಿಮಾನ ನಿಲ್ದಾಣದ ಆವರಣದ ಪೈಪ್ ನಲ್ಲಿ ಅಡಗಿ ಕುಳಿತ ಚಿರತೆ!

02/12/2020

ಡೆಹ್ರಾಡೂನ್: ದಾರಿ ತಪ್ಪಿ ವಿಮಾನ ನಿಲ್ದಾಣದ ಆವರಣಕ್ಕೆ  ಬಂದ ಚಿರತೆಯೊಂದು ವಿಮಾನದ ಶಬ್ಧಕ್ಕೆ ಹೆದರಿ ಪೈಪ್ ವೊಂದರೊಳಗೆ ಅವಿತು ಕುಳಿತು ಆತಂಕ ಸೃಷ್ಟಿಸಿದ ಘಟನೆ ಜಾಲಿಗ್ರಾಂಟ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.


ವಿಮಾನದ ಎಂಜಿನ್ ಶಬ್ಧಕ್ಕೆ ಹೆದರಿದ ಚಿರತೆಯು ಪೈಪ್ ವೊಂದರೊಳಗೆ ಅಡಗಿ ಕುಳಿತಿದ್ದು, ಮಂಗಳವಾರ ಸಂಜೆ ಕೊನೆಯ ವಿಮಾನ  ನಿರ್ಗಮಿಸಿದ ಬಳಿಕ ವಾತಾವರಣ ಶಾಂತವಾದ ಸಂದರ್ಭದಲ್ಲಿ ಚಿರತೆಯು ಮೆಲ್ಲನೆ ತಾನಿದ್ದ ಸ್ಥಳದಿಂದ ಹೊರ ಬಂದಿದೆ.

ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸುಮಾರು 10 ಗಂಟೆಗಳ ಕಾಲ  ಕಾರ್ಯಾಚರಣೆ ನಡೆಸಿ ಚಿರತೆಯನ್ನು ಪಂಜರದೊಳಗೆ ಬಂಧಿಸಿದೆ. ಬಳಿಕ ಚಿರತೆಯ ವೈದ್ಯಕೀಯ ಪರೀಕ್ಷೆ ನಡೆಸಿ,  ಕಾಡಿಗೆ ಬಿಡಲಾಗುತ್ತದೆ ಎಂದು ಡೆಹ್ರಾಡೂನ್ ಡಿಎಫ್ಒ ರಾಜೀವ್ ಧೀಮನ್ ಹೇಳಿದ್ದಾರೆ.

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ