ಸಾವಿನ ನರ್ತನ: ರೈಲು ಬೋಗಿ ಜೋಡಣೆ ವೇಳೆ ನಡೀತು ದುರಂತ; ಕೆಲಸ ಮಾಡುತ್ತಲೇ ಸಾವನ್ನಪ್ಪಿದ ರೈಲ್ವೆ ಕಾರ್ಮಿಕ - Mahanayaka

ಸಾವಿನ ನರ್ತನ: ರೈಲು ಬೋಗಿ ಜೋಡಣೆ ವೇಳೆ ನಡೀತು ದುರಂತ; ಕೆಲಸ ಮಾಡುತ್ತಲೇ ಸಾವನ್ನಪ್ಪಿದ ರೈಲ್ವೆ ಕಾರ್ಮಿಕ

09/11/2024

ರೈಲು ಬೋಗಿ ಜೋಡಿಸುವಾಗ ಸಂಭವಿಸಿದ ಅವಘಡದಿಂದಾಗಿ ರೈಲ್ವೆ ಪೋರ್ಟರ್ ಒಬ್ಬರು ಮೃತಪಟ್ಟಿರುವ ಘಟನೆ
ಬಿಹಾರದ ಬೆಗುಸರಾಯ್ ನ ಬರೌನಿ ಜಂಕ್ಷನ್ ನಲ್ಲಿ ಶನಿವಾರ ನಡೆದಿದೆ. ಮೃತನನ್ನು ಸೋನ್ಪುರ್ ರೈಲ್ವೆ ವಿಭಾಗದ ಅಡಿಯಲ್ಲಿ ಕೆಲಸ ಮಾಡುವ ಪೋರ್ಟರ್ ಅಮರ್ ಕುಮಾರ್ ರಾವ್ ಎಂದು ಗುರುತಿಸಲಾಗಿದೆ.

ಲಕ್ನೋ-ಬರೌನಿ ಎಕ್ಸ್ ಪ್ರೆಸ್ (ಸಂಖ್ಯೆ: 15204) ಲಕ್ನೋ ಜಂಕ್ಷನ್ ನಿಂದ ಬರುತ್ತಿದ್ದಂತೆ ಬರೌನಿ ಜಂಕ್ಷನ್ ನ ಪ್ಲಾಟ್ ಫಾರ್ಮ್ 5 ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ರಾವ್ ಸಾವನ್ನಪ್ಪಿದ್ದಾರೆ. ರೈಲ್ವೆ ಮೂಲಗಳ ಪ್ರಕಾರ, ಕಾರ್ಮಿಕ ರಾವ್ ಅವರು ರೈಲಿನ ಬೋಗಿ ಜೋಡಿಸುವಾಗ ರೈಲಿನ ಇಂಜಿನ್ ಅನಿರೀಕ್ಷಿತವಾಗಿ ಹಿಮ್ಮುಖವಾಗಿ ಚಲಿಸಿದ್ದು, ಬೋಗಿಗಳ ನಡುವೆ ಅವರು ಸಿಲುಕಿ ನಜ್ಜುಗುಜ್ಜಾಗಿ ಕಾರ್ಮಿಕ ಸಾವನ್ನಪ್ಪಿದ್ದಾನೆ.

ಘಟನೆ ನಡೆಯುತ್ತಿದ್ದಂತೆ ರೈಲು ಚಾಲಕ ರೈಲಿನಿಂದ ಹೊರಬಂದು ಸ್ಥಳದಿಂದ ಪರಾರಿಯಾಗಿದ್ದಾನೆ. ಅಪಘಾತವನ್ನು ತಡೆಗಟ್ಟಲು ಯಾವುದೇ ಕ್ರಮ ತೆಗೆದುಕೊಳ್ಳಲು ರೈಲು ಚಾಲಕ ವಿಫಲನಾಗಿದ್ದಾನೆ ಎಂದು ಆರೋಪಿಸಲಾಗಿದೆ. ಚಲಿಸುತ್ತಿದ್ದ ಎಂಜಿನ್ ಗೆ ರಾವ್ ಅವರು ಸಿಲುಕಿ ನಜ್ಜುಗುಜ್ಜಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕಾರ್ಮಿಕ ರಾವ್ ಅವರು ಎರಡು ಬೋಗಿಗಳ ನಡುವೆ ಸಿಕ್ಕಿಬಿದ್ದಿರುವುದನ್ನು ವೀಡಿಯೊ ಚಿತ್ರೀಕರಿಸಿದೆ. ಈ ಘಟನೆಯ ಬಗ್ಗೆ ರೈಲ್ವೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ