ರಮೇಶ್ ಜಾರಕಿಹೊಳಿ ಅಮಾಯಕ ಪಾಪ: ಹೆಚ್.ಡಿ.ಕುಮಾರಸ್ವಾಮಿ - Mahanayaka

ರಮೇಶ್ ಜಾರಕಿಹೊಳಿ ಅಮಾಯಕ ಪಾಪ: ಹೆಚ್.ಡಿ.ಕುಮಾರಸ್ವಾಮಿ

09/03/2021

ಬೆಂಗಳೂರು: ರಮೇಶ್ ಜಾರಕಿಹೊಳಿ ಪಾಪ ಅಮಾಯಕರು. ರಾಜಕಾರಣಕ್ಕಾಗಿ ಈ ಮಟ್ಟಕ್ಕೆ ಯಾರು ಕೂಡ ಇಳಿಯಬಾರದು.  ನಾವೆಂದೂ ಸಿಡಿಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.


Provided by
Provided by
Provided by
Provided by
Provided by
Provided by
Provided by

ಬೆಂಗಳೂರಿನಲ್ಲಿ ರಮೇಶ್ ಜಾರಕಿಹೊಳಿ ಸಿಡಿಗೆ ಸಂಬಂಧಪಟ್ಟಂತೆ ಪತ್ರಕರ್ತರ ಜೊತೆಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಅಮಾಯಕರಾಗಿದ್ದಾರೆ.  ಆ ಹೆಣ್ಣು ಮಗಳು ನಿಜವಾಗಿಯೂ ಸಂತ್ರಸ್ತೆಯಾಗಿದ್ದರೆ, ಆಕೆ ಏಕೆ ಸಮಾಜದ  ಮುಂದೆ ಬರುತ್ತಿಲ್ಲ, ಆಕೆಯ ಕುಟುಂಬಸ್ಥರು ಯಾಕೆ ಸಮಾಜದ ಮುಂದೆ ಬರುತ್ತಿಲ್ಲ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ನಮ್ಮ ಎಚ್ಚರದಲ್ಲಿ ನಾವು ಇರಬೇಕು. ಮಹಾಭಾರತ ರಾಮಾಯಣ ಆಗಿರುವುದು ಕೂಡ ಗಂಡು-ಹೆಣ್ಣಿನಿಂದಲೇ ಅಲ್ಲವೇ?  ಎಂದು ಅವರು ಹೇಳಿದರು. ಜೊತೆಗೆ 6 ಮಂದಿ ಸಚಿವರು ಕೋರ್ಟ್ ಮೊರೆ ಹೋಗಿರುವುದರ ವಿರುದ್ಧ  ಮಾತನಾಡಿದ ಅವರು,  12 ಜನ ಮುಂಬೈಗೆ ಹೋಗಿದ್ದರು. ಅಲ್ಲಿ ಆ ಪುಣ್ಯಾತ್ಮರು ಏನು ಮಾಡಿದ್ದಾರೋ? ಈ ಮಟ್ಟಕ್ಕೆ ಯಾರೂ ಇಳಿಯ ಬಾರದು  ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ