ಗಾಝಾದಲ್ಲಿ ಕದನ ವಿರಾಮ ಸಂಬಂಧ ಎರಡನೇ ಹಂತದ ಮಾತುಕತೆಗೆ ಸಿದ್ದ: ಹಮಾಸ್ - Mahanayaka

ಗಾಝಾದಲ್ಲಿ ಕದನ ವಿರಾಮ ಸಂಬಂಧ ಎರಡನೇ ಹಂತದ ಮಾತುಕತೆಗೆ ಸಿದ್ದ: ಹಮಾಸ್

27/02/2025

ಗಾಝಾದಲ್ಲಿ ಕದನ ವಿರಾಮ ಸಂಬಂಧ ಎರಡನೇ ಹಂತದ ಮಾತುಕತೆಗೆ ಸಿದ್ದ ಎಂದು ಹಮಾಸ್ ಗುರುವಾರ ಹೇಳಿದೆ. ಇಸ್ರೇಲ್ ಜೈಲಿನಲ್ಲಿದ್ದ ಹಲವಾರು ಫೆಲೆಸ್ತೀನಿ ನಾಗರಿಕರನ್ನು ಇಸ್ರೇಲ್ ರಾತ್ರೋರಾತ್ರಿ ಬಿಡುಗಡೆ ಮಾಡಿದ ಬಳಿಕ ಹಮಾಸ್‌ನಿಂದ ಈ ಹೇಳಿಕೆ ಹೊರ ಬಿದ್ದಿದೆ. ಇದಕ್ಕೂ ಮುನ್ನ ನಾಲ್ವರು ಒತ್ತೆಯಾಳುಗಳ ಶವವನ್ನು ಇಸ್ರೇಲ್‌ಗೆ ಹಮಾಸ್ ಹಸ್ತಾಂತರಿಸಿತ್ತು.


Provided by

ಜ.19ರಿಂದ 6 ವಾರಗಳ ಮೊದಲ ಹಂತದ ಕದನ ವಿರಾಮ ಜಾರಿಗೆ ಬಂದಿತ್ತು. ಎರಡನೇ ಹಂತದ ಮಾತುಕತೆ ಇನ್ನಷ್ಟೇ ಆರಂಭವಾಗಬೇಕಿದೆ. 2023ರ ಅಕ್ಟೋಬರ್‌ನಲ್ಲಿ ಈ ಯುದ್ಧ ಆರಂಭವಾಗಿತ್ತು.
ಇನ್ನಿರುವ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕಾದರೆ, ಕದನ ವಿರಾಮದ ಆಶ್ವಾಸನೆ ನೀಡಬೇಕು ಎಂದು ಹಮಾಸ್ ಗುರುವಾರ ಹೇಳಿದೆ.

‘ಕದನ ವಿರಾಮ ಒಪ್ಪಂದಕ್ಕೆ ನಾವು ಸಂಪೂರ್ಣ ಬದ್ಧತೆಯನ್ನು ಪ್ರದರ್ಶಿಸುತ್ತೇವೆ. ಎರಡನೇ ಹಂತದ ಮಾತುಕತೆಗಳಿಗೆ ನಾವು ಸಿದ್ದರಾಗಿದ್ದೇವೆ’ ಎಂದು ಹಮಾಸ್ ಪ್ರಕಟಣೆಯಲ್ಲಿ ತಿಳಿಸಿದೆ.

‘ಉಳಿದ 59 ಒತ್ತೆಯಾಳುಗಳನ್ನು ಹಿಂದಿರುಗಿಸುವುದು ಪ್ರಮುಖ ಆದ್ಯತೆಯಾಗಿದೆ. ಆದರೆ ಗಾಜಾದಲ್ಲಿ ಹಮಾಸ್ ನ್ನು ಹಾಗೆಯೇ ಬಿಟ್ಟರೆ ಎರಡನೇ ಹಂತದ ಕದನ ವಿರಾಮದ ಬಗ್ಗೆ ಯಾವುದೇ ಒಪ್ಪಂದವಿರುವುದಿಲ್ಲ. ನಮ್ಮ ಬೇಡಿಕೆ ಸ್ಪಷ್ಟವಾಗಿದೆ ’ ಎಂದು ಇಸ್ರೇಲ್‌ನ ಇಂಧನ ಸಚಿವ ಎಲಿ ಕೋಹೆನ್ ಹೇಳಿದ್ದಾರೆ.

ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ಭಾರೀ ಬಾಂಬ್‌ಗಳನ್ನು ಕಳುಹಿಸಿಕೊಟ್ಟಿದ್ದರಿಂದ ನಾವು ಇನ್ನಷ್ಟು ಬಲಶಾಲಿಗಳಾಗಿದ್ದೇವೆ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ