ನೆರೆಯ ರಾಜ್ಯಗಳ ಜನರು ಬಿಜೆಪಿಯ ನಕಲಿ ಮತದಾರರಾಗಿ ಚುನಾವಣೆಯಲ್ಲಿ ಭಾಗಿ: ದೀದಿ ಗಂಭೀರ ಆರೋಪ - Mahanayaka

ನೆರೆಯ ರಾಜ್ಯಗಳ ಜನರು ಬಿಜೆಪಿಯ ನಕಲಿ ಮತದಾರರಾಗಿ ಚುನಾವಣೆಯಲ್ಲಿ ಭಾಗಿ: ದೀದಿ ಗಂಭೀರ ಆರೋಪ

27/02/2025


Provided by

‘ಚುನಾವಣಾ ಆಯೋಗದ ನೆರವಿನೊಂದಿಗೆ ನೆರೆಯ ರಾಜ್ಯಗಳ ಜನರು ಬಿಜೆಪಿಯ ನಕಲಿ ಮತದಾರರಾಗಿ ಚುನಾವಣೆಯಲ್ಲಿ ಭಾಗಿಯಾಗುತ್ತಿದ್ದು, ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಆಯೋಗದ ಕಚೇರಿ ಎದುರು ಧರಣಿ ನಡೆಸಲಾಗುವುದು’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದಾರೆ.


Provided by

ತೃಣಮೂಲ ಕಾಂಗ್ರೆಸ್‌ ಸಮಾವೇಶದಲ್ಲಿ ಪಾಲ್ಗೊಂಡು ಗುರುವಾರ ಮಾತನಾಡಿದ ಅವರು, ‘ಜ್ಞಾನೇಶ್ ಕುಮಾರ್ ಅವರನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಿರುವ ಕೇಂದ್ರ ಸರ್ಕಾರವು, ಸಾಂವಿಧಾನಿಕ ಸಂಸ್ಥೆಯ ಮೇಲೆ ಪ್ರಭಾವ ಬೀರುತ್ತಿದೆ. ಚುನಾವಣಾ ಆಯೋಗದ ಕೃಪೆಯೊಂದಿಗೆ ಮತದಾರರ ಪಟ್ಟಿಯನ್ನು ಬಿಜೆಪಿ ಹೇಗೆ ತಿರುಚುತ್ತಿದೆ ಎಂಬುದಕ್ಕೆ ಇದುವೇ ಸ್ಪಷ್ಟ ನಿದರ್ಶನವಾಗಿದೆ’ ಎಂದು ಆರೋಪಿಸುತ್ತಿದ್ದಾರೆ.

‘ದೆಹಲಿ ಮತ್ತು ಮಹಾರಾಷ್ಟ್ರ ಚುನಾವಣೆಯಲ್ಲಿ ಹರಿಯಾಣ ಮತ್ತು ಗುಜರಾತ್‌ನ ಮತದಾರರು ಭಾಗಿಯಾಗುವಂತೆ ಬಿಜೆಪಿ ತಂತ್ರ ಹೆಣೆದಿತ್ತು. ನಕಲಿ ಮತದಾರರನ್ನೇ ಬಳಸಿಕೊಂಡು ಅಕ್ರಮ ಎಸಗಿದ ಬಿಜೆಪಿ, ಈ ರಾಜ್ಯಗಳ ಚುನಾವಣೆಗಳನ್ನು ಗೆದ್ದುಕೊಂಡಿತು. ಇದೀಗ ಇದೇ ಮಾದರಿಯಲ್ಲಿ ಇತರ ರಾಜ್ಯಗಳ ನಕಲಿ ಮತದಾರರನ್ನು ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಬಳಸುವ ತಂತ್ರ ರೂಪಿಸಿದೆ. ಆದರೆ ನಮ್ಮ ರಾಜ್ಯದಲ್ಲಿ ಅದು ಎಂದಿಗೂ ಬಿಜೆಪಿಗೆ ಸಾಧ್ಯವಾಗುವುದಿಲ್ಲ’ ಎಂದು ಮಮತಾ ಕಿಡಿಯಾಡಿದ್ದಾರೆ.


Provided by

‘ಬಿಜೆಪಿಯ ನೆರವಿನೊಂದಿಗೇ ಅವರು ಕರೆತರುವ ನಕಲಿ ಮತದಾರರನ್ನು ನಾವು ಪತ್ತೆ ಮಾಡುತ್ತೇವೆ. ಪಶ್ಚಿಮ ಬಂಗಾಳದಲ್ಲಿ ಎಂದಿಗೂ ಹೊರಗಿನವರಿಗೆಅವಕಾಶ ನೀಡುವುದಿಲ್ಲ. ದೆಹಲಿ ಮಾಡಿದ ಕೃತ್ಯವು ಪಶ್ಚಿಮ ಬಂಗಾಳದಲ್ಲಿ ಪುನರಾವರ್ತಿಸಲು ಅವಕಾಶ ನೀಡುವುದಿಲ್ಲ’ ಎಂದು ಗುಡುಗಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ