ಪ್ರೇಮಿಗಳ ದಿನದ ಪ್ರಯುಕ್ತ ಕೆಂಪು ಗುಲಾಬಿ ಬೆಲೆ ಏರಿಕೆ: ರೈತರ ಮೊಗದಲ್ಲಿ ಸಂತಸ

ಚಿಕ್ಕಬಳ್ಳಾಪುರ: ಪ್ರೇಮಿಗಳ ದಿನಾಚರಣೆಯ ಪ್ರಯುಕ್ತ ಕೆಂಪು ಗುಲಾಬಿಗೆ ಭರ್ಜರಿ ದರ ಏರಿಕೆಯಾಗಿದೆ. ಯಾವಾಗಲು 5ರಿಂದ 10 ರೂಪಾಯಿಗೆ ಸಿಗುತ್ತಿದ್ದ ಕೆಂಪು ಗುಲಾಬಿಯ ದರ ಪ್ರೇಮಿಗಳ ದಿನಾಚರಣೆಯಾದ ಫೆಬ್ರವರಿ 14ರಂದು ಬರೊಬ್ಬರಿ 25ರಿಂದ 35 ರೂಪಾಯಿಗೆ ದರ ಏರಿಕೆಯಾಗಿದೆ.
ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಗುಲಾಬಿಗೆ ದರ ಏರಿಕೆಯಾದರೂ ಪ್ರೇಮಿಗಳು ಖರೀದಿಸುತ್ತಾರೆ. ಇದರಿಂದಾಗಿ ಗುಲಾಬಿ ಬೆಳೆದ ರೈತರಿಗೆ ಉತ್ತಮ ವ್ಯಾಪಾರ, ಉತ್ತಮ ಹಣಗಳಿಕೆಯಾಗುತ್ತಿದೆ.
ಪ್ರೇಮಿಗಳ ದಿನಾಚರಣೆಯಂದು ಸಾಕಷ್ಟು ಪ್ರೇಮಿಗಳು ತಮ್ಮ ಪ್ರೀತಿ ಪಾತ್ರರಿಗೆ ಗುಲಾಬಿ ಹೂವು ನೀಡಿ ಪ್ರಪೋಸ್ ಮಾಡಿ ಅವರ ಗಮನ ಸೆಳೆಯುತ್ತಾರೆ. ಮಾತ್ರವಲ್ಲದೇ ಈಗಾಗಲೇ ಪ್ರೇಮಿಗಳಾಗಿರುವ ಜೋಡಿಗಳು ಕೂಡ ಗುಲಾಬಿ ಹೂವು ನೀಡುವ ಮೂಲಕ ತಮ್ಮ ಸಂಗಾತಿಯ ಜೊತೆಗೆ ಶುಭಾಶಯಗಳನ್ನು ಹಂಚಿಕೊಳ್ಳುತ್ತಾರೆ.
ಪ್ರೇಮಿಗಳ ದಿನಾಚರಣೆಯಂದು ಒಂದು ಗುಲಾಬಿಗೆ 30—35 ಅದಕ್ಕಿಂತಲೂ ಹೆಚ್ಚು ಬೆಲೆ ಇದ್ದರೂ ಪ್ರೀತಿಯ ಮುಂದೆ ಯಾವುದೇ ಬೆಲೆಗಳು ಮುಖ್ಯವಾಗುವುದಿಲ್ಲ, ಫೆಬ್ರವರಿ 14ರಂದು ಗುಲಾಬಿಯ ಬೆಲೆ 50ರ ಗಡಿದಾಟಿದರೂ ಆಶ್ಚರ್ಯವೇನಿಲ್ಲ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: