14 ವರ್ಷದ ಬಾಲಕಿಯನ್ನು ಗರ್ಭಿಣಿ ಮಾಡಿದ್ದ ರೀಲ್ಸ್ ಸ್ಟಾರ್ ಗೆ 20 ವರ್ಷ ಜೈಲು ಶಿಕ್ಷೆ
ಹೈದರಾಬಾದ್: ಟಿಕ್ ಟಾಕ್ ಮೂಲಕ ಖ್ಯಾತಿ ಹೊಂದಿದ್ದ ಫನ್ ಬಕೆಟ್ ಭಾರ್ಗವ್(Fun Bucket Bhargav) ವಿಡಿಯೋ ಮಾಡುವ ನೆಪದಲ್ಲಿ ಬಾಲಕಿಯನ್ನು ಕರೆಸಿ, ಲೈಂಗಿಕ ದೌರ್ಜನ್ಯ ಎಸಗಿ, ಆಕೆ ಗರ್ಭಿಣಿಯಾಗಲು ಕಾರಣವಾಗಿದ್ದ. ಇದೀಗ ಈ ಪ್ರಕರಣದ ವಿಚಾರಣೆ ಮುಕ್ತಾಯವಾಗಿದ್ದು, ಭಾರ್ಗವನಿಗೆ ನ್ಯಾಯಾಲಯವು ಕಠಿಣ ಶಿಕ್ಷೆ ವಿಧಿಸಿದೆ.
ಫನ್ ಬಕೆಟ್ ಭಾರ್ಗವ್ ಗೆ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು, ವಿಶಾಖಪಟ್ಟಣಂ(Visakhapatnam)ನ ಪೋಕ್ಸೋ ಕೋರ್ಟ್ ಭಾರ್ಗವ್ ಗೆ ಈ ಶಿಕ್ಷೆ ವಿಧಿಸಿದೆ. ಅಲ್ಲದೇ ಸಂತ್ರಸ್ತ ಬಾಲಕಿಗೆ 4 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ಹಾಸ್ಯ ವಿಡಿಯೋಗಳ ಮೂಲಕ ಭಾರ್ಗವ್ ಖ್ಯಾತಿ ಹೊಂದಿದ್ದ. ಯೂಟ್ಯೂಬ್ ನಲ್ಲೂ ಫನ್ ಬಕೆಟ್ ಎಂಬ ಕಾಮಿಡಿ ವಿಡಿಯೋಗಳನ್ನು ಮಾಡುತ್ತಿದ್ದ. ಇಂಗ್ಲಿಷ್ ಭಾಷೆಯಲ್ಲಿ ಎಲ್ಲರಿಗೂ ಅರ್ಥವಾಗುವಂತಹ ಸಾಮಾನ್ಯ ಕಾಮಿಡಿ ವಿಡಿಯೋಗಳು ಬಹಳ ಬೇಗನೇ ಫೇಮಸ್ ಆಗಿತ್ತು.
ವಿಡಿಯೋ ತೆಗೆಯುವ ನೆಪದಲ್ಲಿ 14 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಭಾರ್ಗವ್ ಇದೀಗ ಜೈಲುಪಾಲಾಗಿದ್ದಾನೆ. ಭಾರ್ಗವ್ ವಿರುದ್ಧ ದಿಶಾ ಕಾಯ್ದೆ ಹಾಗೂ ಪೋಕ್ಸೋ(POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು.