ರಿಲೀಫ್: ಕುವೈಟ್ ನಲ್ಲಿ ಇನ್ಮುಂದೆ 60 ವಯಸ್ಸು ದಾಟಿದವರಿಗೆ ಸಿಗುತ್ತೆ ವೀಸಾ; ನಿಯಂತ್ರಣ ತೆರವು
60 ವಯಸ್ಸನ್ನು ದಾಟಿದವರಿಗೆ ಕುವೈಟ್ ಈವರೆಗೆ ವೀಸಾ ನಿಯಂತ್ರಣವನ್ನು ಹೇರಿತ್ತು. ಇದೀಗ ಈ ನಿಯಂತ್ರಣವನ್ನ ತೆರವುಗೊಳಿಸಲಾಗಿದೆ. ಆದರಿಂದ ಇನ್ನು ಮುಂದೆ ಆರವತ್ತು ವರ್ಷವನ್ನು ದಾಟಿದವರು ಅಧಿಕ ಶುಲ್ಕವನ್ನು ಪಾವತಿಸದೇ ವರ್ಕ್ ಪರ್ಮಿಟ್ ನವೀಕರಿಸುವುದಕ್ಕೂ ಇನ್ನೋರ್ವ ಮಾಲಕನ ಅಧೀನದಲ್ಲಿ ಕೆಲಸವನ್ನು ಪ್ರಾರಂಭಿಸುವುದಕ್ಕೂ ಅವಕಾಶ ಲಭ್ಯವಾದಂತಾಗಿದೆ.
ಈ ಮೊದಲು 60 ವರ್ಷ ದಾಟಿದ ಇಂಥವರಿಗೆ ವೀಸಾ ನವೀಕರಿಸುವುದಕ್ಕೆ ಮತ್ತು ಆರೋಗ್ಯ ಇನ್ಸೂರೆನ್ಸ್ ಶುಲ್ಕಗಳನ್ನು ತುಂಬುವುದಕ್ಕಾಗಿ ಸಾವಿರ ದಿರ್ಹಮ್ ಗಿಂತಲೂ ಅಧಿಕ ಹಣವನ್ನು ಖರ್ಚು ಮಾಡಬೇಕಾಗಿತ್ತು. ಆ ಕಾರಣಕ್ಕಾಗಿ ಹೆಚ್ಚಿನವರು ಇಕಾಮವನ್ನು ನವೀಕರಿಸದೆ ಭಾರತಕ್ಕೆ ಮರಳುತ್ತಿದ್ದರು. ದಶಕಗಳಿಂದ ಕೆಲಸ ಮಾಡುತ್ತಾ ಇರುವವರು ವಯಸ್ಸಿನ ಕಾರಣಕ್ಕಾಗಿ ದೇಶ ಬಿಡುವುದರಿಂದ ದೇಶದ ಕೌಶಲ್ಯ ವಿಭಾಗಕ್ಕೆ ಬಾರಿ ತೊಂದರೆಯಾಗುತ್ತಿದೆ ಎಂಬ ವರದಿಯನ್ನು ಅನುಸರಿಸಿ ಇದೀಗ ಕುವೈಟ್ ಬದಲಾವಣೆಗೆ ತೆರೆದುಕೊಂಡಿದೆ.
ಕುವೈಟ್ ಸರಕಾರದ ಈ ಹೊಸ ನಿರ್ಧಾರವು ಸಾವಿರಾರು ಭಾರತೀಯರ ಪಾಲಿಗೆ ಪ್ರಯೋಜನಕಾರಿಯಾಗಲಿದೆ ಎಂದು ಹೇಳಲಾಗಿದೆ. ಯೂನಿವರ್ಸಿಟಿ ಪದವಿ ಇಲ್ಲದ 60 ವಯಸ್ಸಿನ ಗಿಂತ ಮೇಲಿರುವ ಭಾರತೀಯರಿಗೆ ವೀಸಾ ನವೀಕರಿಸುವುದಕ್ಕೆ 2021 ರಿಂದ ಈ ನಿಯಂತ್ರಣವನ್ನು ಹೇರಲಾಗಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj