ಅಝಾನ್ ಗೆ ನಿಯಂತ್ರಣ ಹೇರಲು ಇಸ್ರೇಲ್ ನಿರ್ಧಾರ: ವ್ಯಾಪಕ ಆಕ್ರೋಶ
ಮಸೀದಿಯಿಂದ ಮೊಳಗುವ ಅಝಾನ್ ಗೆ ನಿಯಂತ್ರಣ ಹೇರಲು ಇಸ್ರೇಲ್ ನಿರ್ಧರಿಸಿದೆ. ಮಸೀದಿಗಳಿಂದ ಮೈಕ್ ಗಳನ್ನು ತೆರವುಗೊಳಿಸಲು ಇಸ್ರೇಲ್ ನ ರಕ್ಷಣಾ ಸಚಿವ ಇಟ್ಟಾಮರ್ ಬೆನ್ ಗಿವಿರ್ ನಿರ್ದೇಶನ ನೀಡಿದ್ದಾರೆ. ಯಾರು ಈ ಕಾನೂನು ಉಲ್ಲಂಘಿಸುತ್ತಾರೋ ಅವರಿಗೆ ದಂಡ ವಿಧಿಸುವುದಕ್ಕೂ ಪೊಲೀಸರಿಗೆ ಅನುಮತಿ ನೀಡಿದ್ದಾರೆ.
ಶಬ್ದ ಮಾಲಿನ್ಯದ ಕಾರಣವನ್ನು ಕೊಟ್ಟು ಇಸ್ರೇಲ್ ಈ ಅಝಾನ್ ನಿಯಂತ್ರಣಕ್ಕೆ ಹೊರಟಿದೆ. ಪಶ್ಚಿಮ ಜೆರುಸೆಲೇಂನಲ್ಲಿರುವ ಅರಬ್ ಮೂಲದ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಈ ನಿಯಂತ್ರಣವನ್ನು ಹೇರಲಾಗಿದೆ. ಅರ್ಧ ರಾತ್ರಿಯೂ ಸೇರಿದಂತೆ ಇಲ್ಲಿಯ ಮಸೀದಿಗಳಿಂದ ಧ್ವನಿ ಕೇಳಿಸುತ್ತದೆ ಎಂದು ಈ ಪ್ರದೇಶದ ಯಹೂದಿಯರು ಆರೋಪಿಸಿ ರಂಗಕ್ಕಿಳಿದಿದ್ದರು. ಇದೇ ಕಾರಣವನ್ನು ಮುಂದಿರಿಸಿ ಇದೀಗ ಇಸ್ರೇಲ್ ಅಝಾನ್ ನಿಯಂತ್ರಣಕ್ಕೆ ಹೊರಟಿದೆ.
ಇದೇ ವೇಳೆ ಇದು ಅತ್ಯಂತ ಪ್ರಚೋದನಕಾರಿ ನಿಯಮ ಎಂದು ಅರಬ್ ಮುಸ್ಲಿಂ ಸಮೂಹದ ಮೇಯರ್ ಗಳು ಅಕ್ಷೇಪಿಸಿದ್ದಾರೆ. ಇದು ಸಮಸ್ಯೆ ಪರಿಹಾರಕ್ಕಿಂತ ಹೆಚ್ಚು ಪ್ರಶ್ನೆಗಳನ್ನು ಹುಟ್ಟು ಹಾಕಲಿದೆ ಎಂದವರು ಹೇಳಿದ್ದಾರೆ. ಬೆನ್ ಗಿವೀರ್ ಮತ್ತೊಮ್ಮೆ ಇಸ್ಲಾಮಿ ಫೋಬಿಯಾಕ್ಕೆ ಬೆಂಕಿ ಕೊಡುತ್ತಿದ್ದಾರೆ ಎಂದು ಇಲ್ಲಿಯ ಸಂಸದ ಅಹಮದ್ ತೀಬಿ ಹೇಳಿದ್ದಾರೆ. ಈ ದಬ್ಬಾಳಿಕೆ ನಿಯಮವನ್ನು ಎದುರಿಸುವುದಾಗಿಯೂ ಅವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj