ವಿವಾದ: ಬಲವಂತದ ಮತಾಂತರ ನಿಷೇಧ ಮಸೂದೆಗೆ ರಾಜಸ್ಥಾನ ಸರಕಾರ ಅಂಗೀಕಾರ - Mahanayaka

ವಿವಾದ: ಬಲವಂತದ ಮತಾಂತರ ನಿಷೇಧ ಮಸೂದೆಗೆ ರಾಜಸ್ಥಾನ ಸರಕಾರ ಅಂಗೀಕಾರ

02/12/2024

ಬಲವಂತದ ಮತಾಂತರ ನಿಷೇಧ ಮಸೂದೆಯನ್ನು ರಾಜಸ್ಥಾನ ಸರಕಾರ ಅಂಗೀಕರಿಸಿದ್ದು ಧರ್ಮ ಪರಿವರ್ತನೆ ಮಾಡಬಯಸುವ ವ್ಯಕ್ತಿ 60 ದಿನಕ್ಕಿಂತ ಮೊದಲು ಜಿಲ್ಲಾಧಿಕಾರಿಗೆ ಕೋರಿಕೆ ಸಲ್ಲಿಸಬೇಕಾಗುತ್ತದೆ. ಬಳಿಕ ಈ ಕೋರಿಕೆಯ ಬಗ್ಗೆ ಜಿಲ್ಲಾಧಿಕಾರಿಯವರು ಅಧ್ಯಯನ ಕೈಗೊಳ್ಳಲಿದ್ದಾರೆ. ಇದು ಬಲವಂತದ ಧರ್ಮ ಪರಿವರ್ತನೆಯೋ ಅಥವಾ ಅಲ್ಲವೋ ಅನ್ನುವುದು ಈ ಅಧ್ಯಯನದ ಮುಖ್ಯ ಉದ್ದೇಶ.

ಒಂದು ವೇಳೆ ಇದು ಅವರಿಗೆ ಬಲವಂತದ ಮತಾಂತರ ಎಂದು ಅನಿಸಿದರೆ ಅವರದನ್ನು ತಡೆಯಲಿದ್ದಾರೆ. ಇದೇ ವೇಳೆ ಈ ನಿಯಮವು ಮತಾಂತರವನ್ನು ಬಲವಂತದಿಂದ ತಡೆಯುವುದಕ್ಕೆ ಮತ್ತು ಮತಾಂತರದಿಂದ ಹಿಂಜರಿಯುವಂತೆ ಮಾಡುವುದಕ್ಕಾಗಿ ಮಾಡಲಾದ ಕಾನೂನು ಎಂದು ಪ್ರತಿಪಕ್ಷಗಳು ಆಕ್ಷೇಪಿಸಿವೆ.

ಮತಾಂತರವನ್ನು ಗುರಿಯಾಗಿಸಿಕೊಂಡು ಓರ್ವ ವ್ಯಕ್ತಿ ಮದುವೆಯಾದರೆ ಆ ಮದುವೆಯನ್ನೇ ಅಸಿಂಧು ಗೊಳಿಸಲು ಕೌಟುಂಬಿಕ ನ್ಯಾಯಾಲಯಕ್ಕೆ ಈ ಮಸೂದೆಯು ಅಧಿಕಾರವನ್ನು ನೀಡುತ್ತದೆ. ಹಾಗೆಯೇ ವಿವಿಧ ನಿಯಮಗಳ ಉಲ್ಲಂಘನೆಗಾಗಿ ಈ ಮಸೂದೆಯಲ್ಲಿ ಒಂದರಿಂದ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾಪವೂ ಇದೆ. ಅಲ್ಲದೆ ಜಾಮೀನು ರಹಿತ ಶಿಕ್ಷೆಯನ್ನು ನೀಡುವುದಕ್ಕೆ ಈ ಮಸೂದೆಯಲ್ಲಿ ಅವಕಾಶವಿದೆ.

ಕಳೆದ ವಾರ ರಾಜಸ್ಥಾನದ ಬಿಜೆಪಿ ಸರಕಾರದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಮಸೂದೆಗೆ ಅಂಗೀಕಾರವನ್ನು ನೀಡಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ