ಸೋನುಗೌಡಗೂ ಅಶ್ಲೀಲ ಮೆಸೆಜ್ ಕಳಿಸಿದ್ದನಂತೆ ರೇಣುಕಾಸ್ವಾಮಿ! - Mahanayaka
7:58 AM Wednesday 17 - September 2025

ಸೋನುಗೌಡಗೂ ಅಶ್ಲೀಲ ಮೆಸೆಜ್ ಕಳಿಸಿದ್ದನಂತೆ ರೇಣುಕಾಸ್ವಾಮಿ!

sonu shrinivasgowda
24/06/2024

ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡಿದ್ದ ರೇಣುಕಾಸ್ವಾಮಿ ಹಲವು ಸೆಲೆಬ್ರೆಟಿಗಳಿಗೆ ಅಸಭ್ಯ ಮೆಸೆಜ್ ಹಾಕಿರುವುದು ವರದಿಯಾಗುತ್ತಿದ್ದು, ನಿನ್ನೆ ಬಿಗ್‌ ಬಾಸ್ ಖ್ಯಾತಿಯ ನಟಿ ಚಿತ್ರಾಲ್ ರಂಗಸ್ವಾಮಿ ಅವರು, ರೇಣುಕಾಸ್ವಾಮಿಯಿಂದ ತಮಗೂ ಕಿರುಕುಳ ಆಗಿರುವುದಾಗಿ ಹೇಳಿಕೊಂಡಿದ್ದರು. ಇದರ ಬೆನ್ನಲ್ಲೇ ಕನ್ನಡದ ಬಿಗ್​ ರಿಯಾಲಿಟಿ ಬಿಗ್​ಬಾಸ್​ ಒಟಿಟಿ ಸೀಸನ್ 1 ಸ್ಪರ್ಧಿ ಸೋನುಶ್ರೀನಿವಾಸ ಗೌಡ ಅವರು ಕೂಡ ತಮಗೂ ರೇಣುಕಾಸ್ವಾಮಿ ಖಾತೆಯಿಂದ ಕೆಟ್ಟದಾಗಿ ಮೆಸೆಜ್ ಬಂದಿರುವುದಾಗಿ ಹೇಳಿಕೊಂಡಿದ್ದಾರೆ.


Provided by

ಯ್ಯೂಟೂಬ್​ ನಲ್ಲಿ ನಾನು ಒಂದು ವಿಡಿಯೋ ನೋಡಿದೆ. ಅದೇ ಅಕೌಂಟ್​ನಿಂದ ಸಾಕಷ್ಟು ಹುಡುಗಿಯರಿಗೆ ಈತ ಕೆಟ್ಟ ಕೆಟ್ಟದಾಗಿ ಮೆಸೇಜ್​ ಮಾಡಿದ್ದ. ಹಾಗಾಗಿ ನಾನೂ ನನ್ನ ಫೋನ್​ ನಲ್ಲಿ ಚೆಕ್​ ಮಾಡಿದೆ. ಆಗ ಆ ಯಪ್ಪ ನನಗೂ ಮೆಸೇಜ್​ ಮಾಡಿದ್ದಾರೆ. ಆತ ತಪ್ಪು ಮಾಡಿದ್ದಾನೆ ಅಂತ ಅವರ ಕುಟುಂಬಕ್ಕೆ ನಾನು ಏನು ಹೇಳುತ್ತಿಲ್ಲ. ನನಗೂ ಕೆಟ್ಟದಾಗಿ ಅನೇಕರು ಕಾಮೆಂಟ್ ಮಾಡುತ್ತಾರೆ. ನಿಮ್ಮ ಮನೆ ಹೆಣ್ಣು ಮಕ್ಕಳಿಗೆ ಕಾಮೆಂಟ್ ಮಾಡಿದ್ರೆ ಸುಮ್ಮನೆ ಇರ್ತೀರಾ? ಅವರು ಕೂಡ ಒಳ್ಳೆವರಾಗಿ ಇದಿದ್ದರೇ ದೇವರು ಅವರನ್ನು ಚೆನ್ನಾಗಿ ಇಡುತ್ತಾರೆ ಅಂತ ಸೋನು ಶ್ರೀನಿವಾಸಗೌಡ ಹೇಳಿದ್ದಾರೆ.

ನಿನ್ನೆ ಬಿಗ್‌ ಬಾಸ್ ಖ್ಯಾತಿಯ ನಟಿ ಚಿತ್ರಾಲ್ ರಂಗಸ್ವಾಮಿ ತಮಗೆ ಆಗಿದ್ದ ಅನುಭವ ಬರೆದುಕೊಂಡಿದ್ದರು.  ಈ ಕೊಲೆ ವಿಚಾರವಾಗಿ ಎಲ್ಲರಿಗೂ ಡಿಸ್ಟರ್ಬ್‌ ಕೂಡ ಆಗಿದೆ. ಇಲ್ಲಿ ಯಾರಿಗೂ ನಾನು ಸಪೋರ್ಟ್‌ ಮಾಡಲು ಬಂದಿಲ್ಲ. ದೇವರು ರೇಣುಕಾಸ್ವಾಮಿ ಕುಟುಂಬಕ್ಕೆ ಶಕ್ತಿ ಕೊಡಲಿ. ಆದರೆ ರೇಣುಕಾಸ್ವಾಮಿ ಅವರು ಈ ತರ ಹಲವರಿಗೆ ಸಂದೇಶ ಕಳುಹಿಸಿದ್ದರು. ಈ ಬಗ್ಗೆ ಮಾರ್ಚ್‌ನಲ್ಲಿ ಪೊಲೀಸ್​ ಸ್ಟೇಷನ್‌ನಲ್ಲಿ ಕಂಪ್ಲೇಟ್‌ ಕೂಡ ಆಗಿದೆ. ಅವರ ಅಕೌಂಟ್‌ ಈ ರೀತಿ ಗೌತಮ್‌ ಅನ್ನುವ ಹೆಸರಲ್ಲಿ ಇತ್ತು. ಈ ಅಕೌಂಟ್​ನಿಂದ ಅದೇ ರೀತಿಯ ಕೆಟ್ಟ ಮೆಸೇಜ್‌ ಗಳನ್ನು ಸಾಕಷ್ಟು ಜನರಿಗೆ ಕಳುಹಿಸಿದ್ದರಂತೆ. ನನಗೆ ಅಚ್ಚರಿ ಆಯಿತು ಅಂತ ಹೇಳಿದ್ದರು.

ರೇಣುಕಾಸ್ವಾಮಿ ಕೊಲೆ  ಆರೋಪದಲ್ಲಿ  ನಟ ದರ್ಶನ್, ಪವಿತ್ರಾ ಗೌಡ ಸೇರಿ ಒಟ್ಟು 17 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ದರ್ಶನ್​ ಹಾಗೂ ಪವಿತ್ರ ಜೈಲು ಸೇರುತ್ತಿದ್ದಂತೆ ಕುಟುಂಬಸ್ಥರು ಅವರನ್ನು ಭೇಟಿ ಮಾಡಲು ಬರುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ