ಪೊಲೀಸರ ವಿರುದ್ದ ಲೋಕಾಯುಕ್ತಕ್ಕೆ ದೂರು ನೀಡಿದಕ್ಕೆ ಪದೇ ಪದೇ ಕಾಲ್ ಮಾಡಿ ಹೆದರಿಸುತ್ತಿದ್ದಾರೆ: ಕೆಆರ್ ಎಸ್ ಮುಖಂಡ ಗಂಭೀರ ಆರೋಪ - Mahanayaka

ಪೊಲೀಸರ ವಿರುದ್ದ ಲೋಕಾಯುಕ್ತಕ್ಕೆ ದೂರು ನೀಡಿದಕ್ಕೆ ಪದೇ ಪದೇ ಕಾಲ್ ಮಾಡಿ ಹೆದರಿಸುತ್ತಿದ್ದಾರೆ: ಕೆಆರ್ ಎಸ್ ಮುಖಂಡ ಗಂಭೀರ ಆರೋಪ

krs party
07/02/2023

ಪೊಲೀಸರ ವಿರುದ್ದ ಲೋಕಾಯುಕ್ತಕ್ಕೆ ದೂರು ನೀಡಿದ ಕಾರಣ ಪದೇ ಪದೇ ನನಗೆ ಕಾಲ್ ಮಾಡ್ತಿದ್ದಾರೆ. ಮನೆಯ ಹತ್ತಿರ ಪೊಲೀಸರನ್ನು ಕಳುಹಿಸಿ ನನ್ನ ಹೆಂಡತಿ ಮಕ್ಕಳನ್ನು ಭಯ ಪಡಿಸುತ್ತಿದ್ದಾರೆ. ನನ್ನನ್ನು ವಿಚಾರಣೆಗಾಗಿ ಕಛೇರಿಗೆ ಬರಬೇಕೆಂದು ಆಗಾಗ್ಗೆ ಕಾಲ್ ಮಾಡಿ ನೋಟೀಸು ನೀಡಿ ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ ಎಂದು ಆರ್ ಟಿಐ ಕಾರ್ಯಕರ್ತ ಹಾಗೂ ಕೆಆರ್ ಎಸ್ ಪಕ್ಷದ ಮುಖಂಡ ಕಬೀರ್ ಉಳ್ಳಾಲ್ ಗಂಭೀರವಾಗಿ ಆರೋಪಿಸಿದ್ದಾರೆ.

ಮಂಗಳೂರು ನಗರದ ಪ್ರೆಸ್ ಕ್ಲಬ್‌ನಲ್ಲಿ‌ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಆರೋಪ ಮಾಡಿದ ಅವರು, ಇದರ ಹಿಂದೆ ಪೊಲೀಸ್ ಕಮಿಷನರ್ ಪಾತ್ರವಿದೆ ಅನ್ನಿಸುತ್ತದೆ. ಇಂತಹ ಮಾನಸಿಕ ಹಿಂಸೆ ಈ ಹಿಂದೆ ಅನುಭವಿಸಿಲ್ಲ. ಪೊಲೀಸ್ ಆಯುಕ್ತರ ಕಚೇರಿಯ ಪೊಲೀಸರ ಮಾನಸಿಕ ಕಿರುಕುಳಕ್ಕೆ ಬೇಸತ್ತಿದ್ದೇನೆ. ನಾನು ಲೋಕಾಯುಕ್ತಕ್ಕೆ ಪೊಲೀಸರ ವಿರುದ್ಧ ದೂರು ನೀಡಿದರೆ ದೂರಿನಲ್ಲಿ ಹೆಸರಿಸಿದ ಅಧಿಕಾರಿಗಳಿಂದಲೇ ತನಿಖೆ ನಡೆಸಲು ಆದೇಶಿಸುವುದಾದರೆ ನಾವು ದೂರು ನೀಡಿ ಮಾನಸಿಕ ಹಿಂಸೆ ಅನುಭವಿಸಬೇಕೇ ಎಂದು ಪ್ರಶ್ನಿಸಿದ್ದಾರೆ.

ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂದಿತ್ತು. ಈ ಸಂಬಂಧ ಉಳ್ಳಾಲ ಇನ್ಸ್ ಪೆಕ್ಟರ್ ಸಂದೀಪ್, ಎಸ್ ಐ ಪ್ರದೀಪ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಕಬೀರ್ ಉಳ್ಳಾಲ್ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಲೋಕಾಯುಕ್ತರು ಮಂಗಳೂರು ಪೊಲೀಸ್ ಕಮಿಷನರ್ ಗೆ ನೋಟಿಸ್ ಜಾರಿಗೊಳಿಸಿದ್ದರು.

ಇನ್ಸ್ ಪೆಕ್ಟರ್, ಎಸ್ ಐ ವಿರುದ್ಧ ಹಣ ವಸೂಲಿ ಸೇರಿ ಹಲವು ಆರೋಪಗಳನ್ನು ಕಬೀರ್ ಮಾಡಿದ್ದರು. ಬ್ರೋಕರ್  ಮೂಲಕ ಹಣ ವಸೂಲಿ ಆರೋಪ, ಗಾಂಜಾ ಮಾಫಿಯಾ, ಮರಳು ಮಾಫಿಯಾಗಳಿಂದ ಹಣ ವಸೂಲಿ, ಹೋಟೆಲ್ ಮಾಲೀಕರಿಗೆ ಹಣಕ್ಕೆ ಬೇಡಿಕೆ ಇಟ್ಟ ಆರೋಪ ಹಾಗೂ ಇಬ್ಬರು ಅಧಿಕಾರಿಗಳು ಉಳ್ಳಾಲಕ್ಕೆ ಬಂದ ಬಳಿಕ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡಿದ್ದಾರೆ. ಚಿನ್ನದ ಅಂಗಡಿ ಡರೋಡೆ ಕೇಸ್ ನಲ್ಲಿ ಜಪ್ತಿ ಮಾಡಿದ ಚಿನ್ನ ಮತ್ತು ಬೆಳ್ಳಿಯನ್ನು ಇನ್ಸ್ ಪೆಕ್ಟರ್ ಸಂದೀಪ್ ಎಗರಿಸಿದ್ದಾರೆ ಎಂದು ದೂರಿನಲ್ಲಿ ಕಬೀರ್ ಉಲ್ಲೇಖಿಸಿದ್ದರು.

ಅಲ್ಲದೇ ಮಂಗಳೂರು ಪೊಲೀಸ್ ಕಮಿಷನರ್ ವಿರುದ್ಧವೂ ಆರೋಪ ಮಾಡಿದ್ದರು. ಕಮೀಷನರ್ ಅವರು ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಲೋಕಾಯುಕ್ತರಿಗೆ ಕಬೀರ್ ಉಳ್ಳಾಲ್ ದೂರು ನೀಡಿದ್ದರು. ಈ ಸಂಬಂಧ ದೂರು ದಾಖಲಿಸಿ ಫೆಬ್ರವರಿ 14 ರೊಳಗೆ ಉತ್ತರಿಸುವಂತೆ ಕಮೀಷನರ್ ಗೆ ನೋಟಿಸ್ ನೀಡಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ