ವೇಟಿಂಗ್ ಲಿಸ್ಟ್ ರೈಲು ಟಿಕೆಟ್ ರದ್ದತಿಗೆ 100 ರೂಪಾಯಿ ಕಡಿತ: ಐಆರ್ ಸಿಟಿಸಿ ಪ್ರತಿಕ್ರಿಯೆ
ಹಬ್ಬದ ಋತುವಿನಲ್ಲಿ ಪ್ರಯಾಣಿಕರ ಬೇಡಿಕೆಯ ಹೆಚ್ಚಳವನ್ನು ನಿಭಾಯಿಸಲು ಭಾರತೀಯ ರೈಲ್ವೆ ಸಾವಿರಾರು ವಿಶೇಷ ರೈಲುಗಳನ್ನು ಘೋಷಿಸಿದೆ. ಹೀಗೆ ಮಾಡಿದ್ರೂ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ದಂಡು ಹೆಚ್ಚಾಗುತ್ತಿದೆ.
ಹೀಗಾಗಿ ಅನೇಕ ಪ್ರಯಾಣಿಕರು ಇನ್ನೂ ದೃಢಪಡಿಸಿದ ಟಿಕೆಟ್ ಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.
ಈ ಕುರಿತು ರೈಲ್ವೇ ಪ್ರಯಾಣಿಕರು ಕಳವಳಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ವಿಶೇಷವಾಗಿ ದೃಢೀಕರಿಸದ ಟಿಕೆಟ್ ಗಳು ಮತ್ತು ದೃಢಪಡಿಸಿದ ಟಿಕೆಟ್ ಗಳನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸುವ ಬಗ್ಗೆ ಐಆರ್ಸಿಟಿಸಿಯ ಎಕ್ಸ್ (ಈ ಹಿಂದೆ ಟ್ವಿಟರ್) ಹ್ಯಾಂಡಲ್‌ನಲ್ಲಿ ದೂರುಗಳು ಬರುತ್ತಿವೆ.
ಇತ್ತೀಚಿನ ಘಟನೆಯೊಂದರಲ್ಲಿ, ದೆಹಲಿಯಿಂದ ಪ್ರಯಾಗ್ರಾಜ್‌ಗೆ ವೇಟಿಂಗ್ ನಲ್ಲಿ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರೊಬ್ಬರು ಚಾರ್ಟ್ ಸಿದ್ಧಪಡಿಸಿದ ನಂತರವೂ ಅದು ದೃಢೀಕರಿಸಲಾಗಿಲ್ಲ ಎಂದು ಕಂಡುಕೊಂಡಿದ್ದಾರೆ. ಮರುಪಾವತಿಯ ನಂತರ ಪೂರ್ಣ ಮೊತ್ತವನ್ನು ಸ್ವೀಕರಿಸುವ ಬದಲು 100 ರೂ.ಗಳ ಕಡಿತ ಮಾಡಿರುವುದನ್ನು ಗಮನಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj