ಎಸ್.ಎಸ್.ಎಫ್. ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಸನ್ಮಾನ ಕಾರ್ಯಕ್ರಮ

ಬಜಪೆ: ಎಸ್.ಎಸ್.ಎಫ್. ಆಯೋಜಿಸಿದ ರಾಷ್ಟ ಮಟ್ಟದ ಸಾಹಿತ್ಯೋತ್ಸವದ ಸ್ಪರ್ಧೆ ಅಂಗವಾಗಿ, ಸೌಹಾರ್ದ ನಗರ ಎಸ್.ಎಸ್.ಎಫ್. ಯೂನಿಟ್ ವತಿಯಿಂದ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಹಾಗೂ ಪದ್ಮ ಶ್ರೀ ಪ್ರಶಸ್ತಿ ವಿಜೇತ ಹಾಜಬ್ಬ ಮತ್ತು ಸಾಮಾಜಿಕ ಕಾರ್ಯಕರ್ತ ನಿಸಾರ್ ಕರಾವಳಿ ಯವರಿಗೆ ಸನ್ಮಾನ ಕಾರ್ಯಕ್ರಮ ಬಜಪೆಯ ಸೌಹಾರ್ದ ನಗರ ಮಸೀದಿಯ ಮುಂಭಾಗದ ಮೈದಾನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸಮಿತಿಯ ಹಫೀಜ್ ಕೊಳಂಬೆ ಮಾಜಿ ಮುಖ್ಯ ಸಚೇತಕರಾದ ಐವನ್ ಡಿ’ಸೋಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಧರ್ಮ ಗುರುಗಳಾದ ಇಬ್ರಾಹಿಂ ಮದನಿ, ಕೆ.ಎಚ್.ಹುಸೇನ್ ಷರೀಫ್, ಸಾಮಾಜಿಕ ಕಾರ್ಯಕರ್ತರಾದ ಸಿರಾಜ್ ಬಜಪೆ ಗ್ರಾ.ಪಂ. ಮಾಜಿ ಸದಸ್ಯರಾದ ಜೇಕಬ್ ಪಿರೇರಾ, ಎಂ.ಎಸ್.ಅಶ್ರಫ್ ಅಧ್ಯಕ್ಷರು ಸಿಸ್ಟಮ್ ಎಸ್.ವೈ.ಎಸ್.ಕೊಳಂಬೆ ಬ್ರಾಂಚ್, ಎಂ.ಎಚ್.ಹಸನಬ್ಬ, ಎಂ.ಎಚ್.ಹನೀಫ್, ಇಸ್ಮಾಯಿಲ್ ಇಂಜಿನಿಯರ್, ಸತೀಶ್ ದೇವಾಡಿಗ, ರಾಕೇಶ್ ಕುಂದರ್, ಹನೀಫ್ ಹಿಲ್ ಟಾಪ್, ಅನ್ವರ್ ರಝಕ್ ಬಜಪೆ, ಹಮೀದ್ ಕೊಳಂಬೆ, ನವಾಜ್ ಕೊಳಂಬೆ, ಹಕೀಮ ಕೊಳಂಬೆ ಮತ್ತು ಉಪಸ್ಥಿತರಿದ್ದರು.