ನಟ ಸೈಫ್ ಗೆ ಚೂರಿ ಇರಿತ ಪ್ರಕರಣ: ಶಂಕಿತ ಅರೆಸ್ಟ್; ತನಿಖೆ ತೀವ್ರ

ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ಚೂರಿ ಇರಿತ ಪ್ರಕರಣದ ಶಂಕಿತ ಆರೋಪಿಯನ್ನು ಮುಂಬೈ ಪೊಲೀಸರು ಮಧ್ಯಪ್ರದೇಶದಲ್ಲಿ ಶಂಕಿತನನ್ನು ಬಂಧಿಸಿದ್ದಾರೆ. ಆತನ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಮತ್ತೊಂದೆಡೆ, ಸೈಫ್ ಅವರ ಬಾಂದ್ರಾ ನಿವಾಸ ಸದ್ಗುರು ಶರಣ್ ಅಪಾರ್ಟ್‌ಮೆಂಟ್‌ನ ಸಿಸಿಟಿವಿ ದೃಶ್ಯಾವಳಿಗಳು ಸಹ ವೈರಲ್ ಆಗಿವೆ. ಕ್ಲಿಪ್‌ನಲ್ಲಿ, ಶಂಕಿತ ಆರೋಪಿಯು ಮೆಟ್ಟಿಲುಗಳ ಮೂಲಕ ನಟನ ಮನೆಯಿಂದ ಹೊರಹೋಗುತ್ತಿರುವುದು ಕಾಣಬಹುದು. ಬಾಂದ್ರಾ ರೈಲು ನಿಲ್ದಾಣದ ಸಿಸಿಟಿವಿಯಲ್ಲೂ ಅವನು ಕಾಣಿಸಿಕೊಂಡಿದ್ದು ಪ್ರಸ್ತುತ, ಮುಂಬೈ ಪೊಲೀಸರು ಆತನ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.
ಸೈಫ್ ಅವರ ಪತ್ನಿ ಮತ್ತು ನಟಿ ಕರೀನಾ ಕಪೂರ್ ಖಾನ್ ಶುಕ್ರವಾರ ರಾತ್ರಿ ಅವರ ಹೇಳಿಕೆಯನ್ನು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಮುಂಬೈ ಪೊಲೀಸರು ಅವರ ಸಿಬ್ಬಂದಿ ಮತ್ತು ಮನೆ ಸಹಾಯಕಿ ಸೇರಿದಂತೆ 15 ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಿದ್ದಾರೆ.
ಮುಂಬೈ ಆಸ್ಪತ್ರೆಯ ವೈದ್ಯರು, ನಟನಿಗೆ ನಿರಂತರವಾಗಿ ಹಲವಾರು ಬಾರಿ ಇರಿತ ಉಂಟಾಗಿದೆ ಎಂದು ಹೇಳಿದ್ದಾರೆ. ಇದರಿಂದಾಗಿ ಸೈಫ್ ಅವರ ದೇಹದ ಹಲವು ಭಾಗಗಳಲ್ಲಿ ಆಳವಾದ ಗಾಯಗಳಾಗಿವೆ. ಅಲ್ಲದೇ ಚಾಕುವಿನ ಮುರಿದ ಭಾಗವು ಸೈಫ್ ದೇಹದಲ್ಲಿ ಸಿಲುಕಿಕೊಂಡಿದ್ದು, ಶಸ್ತ್ರಚಿಕಿತ್ಸೆಯ ನಂತರ ಅದನ್ನು ಹೊರತೆಗೆಯಲಾಯಿತು ಎಂದು ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj