ನಟ ಸೈಫ್ ಗೆ ಚೂರಿ ಇರಿತ ಪ್ರಕರಣ: ಆರೋಪಿಯನ್ನು ಬಂಧಿಸಲು ಸಹಕರಿಸಿದ ಆ ಶೂ!

ನಟ ಸೈಫ್ ಅಲಿ ಖಾನ್ ಗೆ ಇರಿತ ಪ್ರಕರಣದ ಆರೋಪಿ ಸಿಕ್ಕಿಬಿದ್ದಿದ್ದು ತನ್ನ ವಿಶಿಷ್ಟ ಶೂ ವಿನ್ಯಾಸದಿಂದ. ಆತನ ಶೂ ಗುರುತು ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸುಮಾರು 500 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಯನ್ನು ತಪಾಸಣೆಗೊಳಪಡಿಸುವ ಮೂಲಕ ಮುಂಬೈ ಪೊಲೀಸರು ಆರೋಪಿಯನ್ನು 72 ಗಂಟೆಗಳ ಅವಧಿಯಲ್ಲಿ ಸೆರೆ ಹಿಡಿದಿದ್ದಾರೆ.
ವಲಯ 9ರ ಉಪ ಪೊಲೀಸ್ ಆಯುಕ್ತ ದೀಕ್ಷಿತ್ ಗೇಡಮ್ ರ ನೇತೃತ್ವದಲ್ಲಿ ನಡೆದ ತನಿಖೆಯು ಆರೋಪಿಯು ನಟ ಸೈಫ್ ಅಲಿ ಖಾನ್ ನಿವಾಸದಿಂದ ತನ್ನ ಅಡಗುತಾಣ ತಲುಪುವವರೆಗೂ ನಡೆಸಿರುವ ಚಲನವಲನವನ್ನು ಪತ್ತೆ ಹಚ್ಚುವುದನ್ನು ಒಳಗೊಂಡಿತ್ತು. ಅಪರಾಧ ಸ್ಥಳದಿಂದ ಪರಾರಿಯಾಗಿದ್ದ ಆರೋಪಿ ಶರೀಫುಲ್, ತನ್ನ ತೊಡುಗೆಯನ್ನು ಬದಲಿಸಿಕೊಂಡು, ಪದೇ ಪದೇ ಸ್ಥಳಗಳನ್ನು ಬದಲಿಸುವ ಮೂಲಕ ತಪ್ಪಿಸಿಕೊಳ್ಳಲು ಯತ್ನಿಸಿದ್ದ.
ಥಾಣೆಯಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ಕೈಗೊಂಡ ನಂತರ, ಜನವರಿ 20ರಂದು ಮುಂಜಾನೆ ನಗರದ ಹೊರವಲಯದಲ್ಲಿರುವ ಪೊದೆಗಳಲ್ಲಿ ಆರೋಪಿಯು ಬಚ್ಚಿಟ್ಟುಕೊಂಡಿರುವುದನ್ನು ಪತ್ತೆ ಹಚ್ಚಲಾಗಿತ್ತು. ಇದಲ್ಲದೆ, ಆರೋಪಿಯು ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದು, ಅಪರಾಧ ಕೃತ್ಯ ನಡೆದ ನಂತರ, ಬಾಂಗ್ಲಾದೇಶಕ್ಕೆ ಪರಾರಿಯಾಗಲು ಯೋಜಿಸಿದ್ದ ಎಂದೂ ಪೊಲೀಸರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj