ಕೇಂದ್ರ ಸರ್ಕಾರ ವಕ್ಫ್ ಕಾಯ್ದೆ ತಿದ್ದುಪಡಿಯಿಂದ ಹಿಂದೆ ಸರಿಯಲಿ: ಸಮಸ್ತ ಕೇರಳ ಜಮೀಯತುಲ್ ಉಲಮಾ ಆಗ್ರಹ - Mahanayaka

ಕೇಂದ್ರ ಸರ್ಕಾರ ವಕ್ಫ್ ಕಾಯ್ದೆ ತಿದ್ದುಪಡಿಯಿಂದ ಹಿಂದೆ ಸರಿಯಲಿ: ಸಮಸ್ತ ಕೇರಳ ಜಮೀಯತುಲ್ ಉಲಮಾ ಆಗ್ರಹ

09/08/2024

ದೇಶದಲ್ಲಿ ಸದ್ಯ ಎಷ್ಟು ವಕ್ಫ್ ಆಸ್ತಿಗಳು ಇವೆಯೋ ಅವನ್ನು ವಕ್ಫ್ ನಿಂದ ಕಸಿದುಕೊಳ್ಳುವುದಕ್ಕೆ ವಕ್ಫ್ ತಿದ್ದುಪಡಿ ಮಸೂದೆಯ ಮೂಲಕ ಸಂಚು ನಡೆಸಲಾಗಿದೆ. ಕೇಂದ್ರ ಸರಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ಮಾಡುವ ಪ್ರಯತ್ನದಿಂದ ಹಿಂದೆ ಸರಿಯಬೇಕು ಎಂದು ಸಮಸ್ತ ಕೇರಳ ಜಮೀಯತುಲ್ ಉಲಮಾ ಅಧ್ಯಕ್ಷ ಮೊಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಮತ್ತು ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ ಆಲಿಕುಟ್ಟಿ ಮುಸ್ಲಿಯರ್ ಆಗ್ರಹಿಸಿದ್ದಾರೆ.

ಈಗಿನ ವಖ್ಫ್ ನಿಯಮಗಳಲ್ಲಿ ಏನೆಲ್ಲ ಅನುಕೂಲತೆಗಳಿವೆಯೋ ಅವನ್ನು ಕಿತ್ತು ಹಾಕುವ ಪ್ರಯತ್ನವನ್ನು ತಿದ್ದುಪಡಿ ಮಸೂದೆಯಲ್ಲಿ ಮಾಡಲಾಗಿದೆ. ವಖ್ಫ್ ಸರ್ವೆ ಕಮಿಷನರ್ ಗೆ ಬದಲು ವಖ್ಫ್ ಆಸ್ತಿಗೆ ಸಂಬಂಧಿಸಿ ಜಿಲ್ಲಾಧಿಕಾರಿಗೆ ತೀರ್ಮಾನಿಸುವ ಅಧಿಕಾರವನ್ನು ಈ ಮಸೂದೆಯಲ್ಲಿ ನೀಡಲಾಗಿದೆ.

ಜಿಲ್ಲಾಧಿಕಾರಿ ದೂರನ್ನು ಪರಿಗಣಿಸುವುದರೊಂದಿಗೆ ವಖ್ಫ್ ಸೊತ್ತುಗಳಿಗೆ ನಿಯಮದ ಪ್ರಕಾರ ಇರುವ ಅನುಕೂಲತೆಗಳು ಇಲ್ಲದಾಗುತ್ತದೆ. ಅದೇ ವೇಳೆ ಸೆಂಟ್ರಲ್ ವಖ್ಫ್ ಕೌನ್ಸಿಲ್ ಮತ್ತು ವಖ್ಫ್ ಬೋರ್ಡ್ ಟ್ರಿಬ್ಯುನಲ್ ನ ಹಲವು ಅಧಿಕಾರಗಳನ್ನು ಹೊಸ ಮಸೂದೆಯಲ್ಲಿ ಮೊಟಕುಗೊಳಿಸಲಾಗಿದೆ.

ವಖ್ಫ್ ಸೊತ್ತುಗಳನ್ನು ವಖ್ಫ್ ಬೋರ್ಡಲ್ಲಿ ನೋಂದಣಿ ಮಾಡುವುದಕ್ಕೆ ಜಿಲ್ಲಾಧಿಕಾರಿಯ ಅನುಮತಿ ಅನಿವಾರ್ಯವಾಗಿದೆ. ಭಾಗಶ ಇಲ್ಲವೇ ಪೂರ್ಣ ವಖ್ಫ್ ಸೊತ್ತು ಸರ್ಕಾರದ ಭಾಗವಾಗಿದೆ ಎಂದು ಜಿಲ್ಲಾಧಿಕಾರಿ ವರದಿ ನೀಡಿದರೆ ಆ ಬಳಿಕ ಆ ಸೊತ್ತಿನ ನೊಂದಣಿಗಾಗಿ ನ್ಯಾಯಾಲಯದ ಬಾಗಿಲು ತಟ್ಟಬೇಕು ಎಂದು ಹೊಸ ಮಸೂದೆಯಲ್ಲಿ ಹೇಳಲಾಗಿದೆ. ಸೊತ್ತುಗಳನ್ನು ವಖ್ಫ್ ಆಗಿ ಮಾರ್ಪಡಿಸಲು ಮತ್ತು ನೋಂದಣಿಯಾಗಿರುವ ಎಲ್ಲಾ ಸ್ವತ್ತುಗಳ ರೆವೆನ್ಯೂ ನಿಯಮಗಳನ್ನು ಹೊಸದಾಗಿ ರಚಿಸಬೇಕು ಎಂದು ಈ ತಿದ್ದುಪಡಿಯಲ್ಲಿರುವುದು ವಖ್ಫ್ ಸೊತ್ತುಗಳನ್ನು ಕಬಳಿಸುವುದಕ್ಕಿರುವ ಸಂಚಾಗಿದೆ ಎಂದು ಸಮಸ್ತ ಅಭಿಪ್ರಾಯಪಟ್ಟಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ