ಹಮಾಸ್ ನಾಯಕ ಹತ್ಯೆ ಪ್ರಕರಣ: ಇರಾನ್ ಬೆಂಬಲಕ್ಕೆ ನಿಂತ ಸೌದಿ ಅರೇಬಿಯಾ

ಇಸ್ಮಾಯಿಲ್ ಹನಿಯ ಅವರ ಹತ್ಯೆಗೆ ಸಂಬಂಧಿಸಿ ಸೌದಿ ಅರೇಬಿಯಾ ಇರಾನ್ ಬೆಂಬಲಕ್ಕೆ ನಿಂತಿದೆ. ಈ ಹತ್ಯೆಯು ಇರಾನ್ ನ ಪರಮಾಧಿಕಾರ ಪ್ರಾದೇಶಿಕ ಸಮಗ್ರತೆ ರಾಷ್ಟ್ರೀಯ ಸುರಕ್ಷತೆ ಅಂತಾರಾಷ್ಟ್ರೀಯ ನಿಯಮಗಳು ಹಾಗೂ ವಿಶ್ವಸಂಸ್ಥೆಯ ಒಪ್ಪಂದಗಳ ನಗ್ನ ಉಲ್ಲಂಘನೆಯಾಗಿದೆ ಎಂದು ಅದು ಹೇಳಿದೆ ಪ್ರಾದೇಶಿಕ ಭದ್ರತೆಗೆ ಈ ಹತ್ಯೆ ಅಪಾಯ ಒಡ್ಡಿದೆ ಎಂದು ಕೂಡ ಸೌದಿ ಅರೇಬಿಯಾ ಹೇಳಿದೆ.
ಜಿದ್ದಾದಲ್ಲಿ ನಡೆದ ಆರ್ಗನೈಜೇಷನ್ ಆಫ್ ಇಸ್ಲಾಮಿಕ್ ಕಾರ್ಪೊರೇಷನ್ ಅಥವಾ ಓಐ ಸಿ ಎಕ್ಸಿಕ್ಯೂಟಿವ್ ಕಮಿಟಿ ಯ ಸಭೆಯಲ್ಲಿ ಸೌದಿ ಅರೇಬಿಯಾದ ವಿದೇಶಾಂಗ ಸಚಿವ ಅಮೀರ್ ಪೈಸೆಲ್ ಬಿನ್ ಫರ್ಹಾನ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಫೆಲೆಸ್ತೀನಿಯರ ವಿರುದ್ಧ ಫೆಲಿಸ್ತೀನಿ ನಲ್ಲಿ ಮತ್ತು ಅದರ ಹೊರಗಡೆ ಇಸ್ರೇಲ್ ನಡೆಸುತ್ತಿರುವ ಕ್ರೂರ ದಾಳಿಗಳನ್ನು ಸೌದಿ ಅರೇಬಿಯಾ ಎಚ್ಚರದಿಂದ ನೋಡುತ್ತಿದೆ.
ಜಾಗತಿಕವಾಗಿ ಮತ್ತು ವಿಶ್ವ ಸಂಸ್ಥೆ ಹೊರಡಿಸಿರುವ ಎಲ್ಲಾ ನಿಯಮ ನಿರ್ದೇಶನಗಳನ್ನು ಮೀರಿ ಅತ್ಯಂತ ಕ್ರೂರವಾಗಿ ನಡಕೊಳ್ಳುತ್ತಿದೆ. ಫೆಲೆಸ್ತೀನಿ ಗೆ ಸಂಬಂಧಿಸಿದಂತೆ ನಾಗರಿಕರ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಕಟು ಪದಗಳಿಂದ ಖಂಡಿಸುತ್ತೇವೆ. ಯಾವುದೇ ರಾಷ್ಟ್ರದ ಆಂತರಿಕ ವಿಷಯದಲ್ಲಿ ಮಧ್ಯಪ್ರವೇಶಿಸುವುದನ್ನು ನಾವು ಪ್ರಬಲವಾಗಿ ವಿರೋಧಿಸುತ್ತೇವೆ ಎಂದವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth