ಬ್ರಾಹ್ಮಣ ವಿದ್ಯಾರ್ಥಿಗಳಿಗೆ  5.85 ಕೋಟಿ ರೂ. ಶಿಷ್ಯವೇತನ ಬಿಡುಗಡೆ - Mahanayaka

ಬ್ರಾಹ್ಮಣ ವಿದ್ಯಾರ್ಥಿಗಳಿಗೆ  5.85 ಕೋಟಿ ರೂ. ಶಿಷ್ಯವೇತನ ಬಿಡುಗಡೆ

scholarship
02/01/2025

ಬೆಂಗಳೂರು: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಸಾಂದೀಪನಿ ಯೋಜನೆಯಡಿ 2023—24ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ  5.85 ಕೋಟಿ ಶಿಷ್ಯವೇತನ ಬಿಡುಗಡೆ ಮಾಡಲಾಗಿದೆ.

2023—24ನೇ ಸಾಲಿಗೆ  ಬ್ರಾಹ್ಮಣ ವಿದ್ಯಾರ್ಥಿಗಳಿಂದ  4,474 ಅರ್ಜಿಗಳನ್ನ ಸ್ವೀಕರಿಸಲಾಗಿತ್ತು. ಈ ಪೈಕಿ 3,958 ಮಂದಿ ಶಿಷ್ಯವೇತನ ಪಡೆಯಲು ಅರ್ಜತೆ ಪಡೆದಿದ್ದಾರೆ.

ಮಾರ್ಚ್ 2024ರ ಅಂತ್ಯಕ್ಕೆ 1,737 ಅರ್ಜಿಗಳಿಗೆ  2.41 ಕೋಟಿ ಅನುದಾನದಲ್ಲಿ ಶಿಷ್ಯವೇತನ ಬಿಡುಗಡೆ ಮಾಡಲಾಗಿತ್ತು. ಬಳಿಕ ಸಾರ್ವಜನಿಕ ಚುನಾವಣೆ ನೀತಿ ಸಂಹಿತೆ ಹಾಗೂ ಮಂಡಳಿಯು  ಖಜಾನೆ ಮುಖಾಂತರ ಶಿಷ್ಯವೇತನ ಬಿಡುಗಡೆ ಮಾಡಬೇಕಾದ ಹಿನ್ನೆಲೆ ಈ ತಾಂತ್ರಿಕ ಪ್ರಕ್ರಿಯೆ ಪೂರ್ಣಗೊಳಿಸಿ, ಡಿಸೆಂಬರ್ 2024ರ ಮಾಹೆಯಲ್ಲಿ ಉಳಿದ 2,221 ಅರ್ಜಿಗಳಿಗೆ  3.44 ಕೋಟಿ ರೂಪಾಯಿ ಅನುದಾನದಲ್ಲಿ ಶಿಷ್ಯವೇತನ ಬಿಡುಗಡೆ ಮಾಡಲಾಗಿದೆ ಎಂದು  ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/Ci8F6ckDmAbCBQyqgLqOPx

ಇತ್ತೀಚಿನ ಸುದ್ದಿ