ಸಂಕ್ರಾಂತಿಗೆ ಸಿದ್ಧಿಯನ್ನು ಕರುಣಿಸು: ಹೊಸ ವರ್ಷಕ್ಕೆ ನಾವೇನು ಮಾಡಬೇಕು? - Mahanayaka

ಸಂಕ್ರಾಂತಿಗೆ ಸಿದ್ಧಿಯನ್ನು ಕರುಣಿಸು: ಹೊಸ ವರ್ಷಕ್ಕೆ ನಾವೇನು ಮಾಡಬೇಕು?

sankrati
15/01/2023

  • ಚಂದ್ರಕಾಂತ ಹಿರೇಮಠ, ಬೆಂಗಳೂರು

ಭಾರತ ಹಲವು ಸಂಸ್ಕೃತಿಗಳ ಮತ್ತು ಹಬ್ಬಗಳ ತವರೂರು ಅದರಲ್ಲಿಯೂ ವರ್ಷದ ಮೊದಲ ಆರಂಭವಾಗುವ ಪ್ರಮುಖ ಹಬ್ಬ ಎಂದರೆ ಅದುವೇ ಸಂಕ್ರಾಂತಿ ಇದು ಜನವರಿ 14 ರಂದು ಪ್ರತಿವರ್ಷ ಜಾತಿ ಮತ ಪಂಥ ಭೇದವಿಲ್ಲದೆ ಎಲ್ಲರೂ ಆಚರಿಸುವ ಹಬ್ಬವಾಗಿದೆ.

ಈ ಹಬ್ಬವನ್ನು ಭಾರತದ ಎಲ್ಲಾ ರಾಜ್ಯಗಳು ವಿಭಿನ್ನ ಹೆಸರುಗಳಿಂದ ಮತ್ತು ಧಾರ್ಮಿಕ ಭಾವನೆಯಿಂದ ಆಚರಿಸುತ್ತಾರೆ. ಕರ್ನಾಟಕದಲ್ಲಿ ಸಂಕ್ರಾಂತಿ, ಹರಿಯಾಣದಲ್ಲಿ ಲೋಹರಿ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಉತ್ತರಾಯಣ ಅಥವಾ ಕಿಚಡಿ, ಎಂದು ಪಂಜಾಬ್ ಮತ್ತು ಪಶ್ಚಿಮ ಬಂಗಾಳದಲ್ಲಿ ಸಂಕ್ರಾಂತಿ, ತಮಿಳುನಾಡಿನಲ್ಲಿ ಪೊಂಗಲ್, ಅಸ್ಸಾಂನಲ್ಲಿ ಬಿಹು ಎಂದು ಈ ಹಬ್ಬವನ್ನು ಆಚರಿಸುತ್ತಾರೆ.

ಈ ಹಬ್ಬದಲ್ಲಿ ಪ್ರಕೃತಿಯನ್ನು ಪೂಜಿಸಲಾಗುತ್ತದೆ ಅಂದರೆ ಸೂರ್ಯನನ್ನು ಪೂಜಿಸುವುದರ ಮೂಲಕ ಬೆಳೆಗಳ ಉತ್ತಮ ಇಳುವರಿಗಾಗಿ ದೇವರಲ್ಲಿ ಪ್ರಾರ್ಥಿಸಿ, ರೈತ ಉಪಯೋಗಿಸುವ ನೇಗಿಲು ಕುಂಟೆ,ರೆಂಟೆ,ಎತ್ತು,ಎಲ್ಲವನ್ನು ಪೂಜಿಸಲಾಗುತ್ತದೆ ಮತ್ತು ಕುಟುಂಬದವರೊಂದಿಗೆ ರಾಗಿ ಅಕ್ಕಿ ಎಳ್ಳುಗಳಿಂದ ತಯಾರಿಸಿದ ಆಹಾರವನ್ನು ಸ್ವೀಕರಿಸಲಾಗುತ್ತದೆ ಮತ್ತು ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನವನ್ನು ಮಾಡುತ್ತಾರೆ.

ವೈಜ್ಞಾನಿಕ ರೀತಿಯಲ್ಲಿ ಈ ಹಬ್ಬವನ್ನು ನೋಡಿದಾಗ ಸಂಕ್ರಾಂತಿಯ ಸಮಯದಲ್ಲಿ ಚಳಿ ಹೆಚ್ಚು ಇರುತ್ತದೆ ಈ ಸಮಯದಲ್ಲಿ ಎಳ್ಳು ಮತ್ತು ಬೆಲ್ಲ ಸೇವನೆಯಿಂದ ದೇಹದ ಉಷ್ಣತೆ ಹೆಚ್ಚು ಆಗುತ್ತದೆ ಹಾಗೂ ಚರ್ಮದ ಕಾಂತಿಯು ಹೊಳೆಯುತ್ತದೆ ಈ ಕಾರಣಕ್ಕಾಗಿ ಆಚರಿಸುತ್ತಾರೆ ಮತ್ತು ಭಾರತ ದೇಶದಲ್ಲಿ ಹಬ್ಬದ ಆಚರಣೆ ಹಿಂದೆ ತನ್ನದೇ ಆದ ಮಹತ್ವವಿದೆ ಜನರು ತಮ್ಮ ಕುಟುಂಬ ಬಂಧುಗಳು ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯಲು ಉತ್ತಮವಾದ ಸಮಯ ಎನ್ನಬಹುದು.

ಪ್ರತಿ ವರ್ಷ ನಾವೆಲ್ಲ ಕೂಡ ಸಂಕ್ರಾಂತಿಯನ್ನು ಆಚರಿಸುತ್ತೇವೆ, ಆದರೆ ಈ ವರ್ಷ ನಾವೆಲ್ಲ ಸಂಕ್ರಾಂತಿಗೆ ಅಂದರೆ ಹೊಸ ವರ್ಷಕ್ಕೆ ನಾವೇನು ಮಾಡಬೇಕು?

* ಸೂರ್ಯನ ಕಿರಣಗಳು ಎಲ್ಲಿ ಯಾದರೂ ಹೋಗುತ್ತವೆ ಅದೇ ರೀತಿ ನಮ್ಮ ಮನಸ್ಸನ್ನು ಶುದ್ಧವಾಗಿ ಇಟ್ಟುಕೊಳ್ಳೋಣ್ಣ.

* ಇದಂ ಶರೀರಂ ಎಂಬಂತೆ ನಮ್ಮಿಂದ ಕೈಲಾದಷ್ಟು ನೊಂದವರಿಗೆ ಸಹಾಯ ಹಸ್ತವನ್ನು ಚಾಚೋಣ.

* ನುಡಿದ ನಡೆ ಇದೇ ಜನ್ಮದ ಕಡೆ ಎಂಬಂತೆ ನಮ್ಮ ಆಚಾರ ವಿಚಾರಗಳು ಒಂದೇ ಆಗುವ ದೆಸೆಯಲ್ಲಿ ಜೀವಿಸೋಣ.

* ಮೂಢನಂಬಿಕೆಗಳಿಗೆ ಬಲಿಯಾಗದೆ. ವೈಜ್ಞಾನಿಕತೆ ಮತ್ತು ನಿಜಾಂಶವನ್ನು ಅರಿತು ಸಾಗೋಣ.

* ಗಾನಯೋಗಿ ಕಾಯಕಯೋಗಿ ಧ್ಯಾನಯೋಗಿಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಾಗೋಣ.

* ಮೈಮೇಲೆ ಹರಕು ಬಟ್ಟೆ ಇದ್ದರು ಚಿಂತೆ ಇಲ್ಲ ಕೈಯಲ್ಲೊಂದು ಪುಸ್ತಕ ಇರಲಿ.

* ತಂದೆ ತಾಯಿಗೆ ಒಳ್ಳೆಯ ಮಗನಾಗಿ,ಪತ್ನಿಗೆ ಒಳ್ಳೆಯ ಗಂಡನಾಗಿ,ಮಕ್ಕಳಿಗೆ ಆದರ್ಶ ತಂದೆಯಾಗಿ ಬಾಳೋಣ

* ನಮ್ಮ ಶಕ್ತಿ ಸಾಮರ್ಥ್ಯಗಳ ಮನೆಯಲ್ಲಿ ನಂಬಿಕೆ ಇಟ್ಟು ಕೌಶಲ್ಯವಿತ ಜೀವನವನ್ನು ನಡೆಸೋಣ.

* ಪ್ರತಿ ದಿನವನ್ನು ಮುಗುಳುನಗೆಯಿಂದ ಆರಂಭಿಸೋಣ.

* ಪ್ರತಿ ದಿನ 60 ವರ್ಷ ದಾಟಿದವರು ಮತ್ತು 6 ವಯೋಮಾನದವರ ಜೊತೆ ಸ್ವಲ್ಪ ಸಮಯ ಕಳೆಯೋಣ.

* ಪ್ರತಿದಿನ 30 ನಿಮಿಷವಾದರೂ ದೈಹಿಕ ವ್ಯಾಯಾಮದ ಕಡೆಗೆ ಗಮನ ಹರಿಸೋಣ.

ಬಿದ್ದವರನ್ನು ಕಂಡು ನಗಬೇಡ, ಬಡತನದಲ್ಲಿ ಇರುವವರನ್ನು ಕಂಡು ತಿರಸ್ಕರಿಸಬೇಡ,ಹಸಿದವರನ್ನು ಕಂಡು ತಾತ್ಸಾರ ಬೇಡ,ನೀ ಕಾಲಚಕ್ರದೊಳಗೆ ಇರುವುದು ಎಂದಿಗೂ ಮರೆಯಬೇಡ.ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು.

 

ಇತ್ತೀಚಿನ ಸುದ್ದಿ