ಯುವತಿಯ ಮೇಲೆ ಅತ್ಯಾಚಾರ | ಪೊಲೀಸ್ ಕಾನ್ ಸ್ಟೆಬಲ್ ಬಂಧನ - Mahanayaka

ಯುವತಿಯ ಮೇಲೆ ಅತ್ಯಾಚಾರ | ಪೊಲೀಸ್ ಕಾನ್ ಸ್ಟೆಬಲ್ ಬಂಧನ

17/11/2020

ಚಾಮರಾಜನಗರ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಾನ್ ಸ್ಟೆಬಲ್ ಒಬ್ಬನನ್ನು ನಗರದ ರಾಮಸಮುದ್ರ ಠಾಣೆಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಸಂತೇಮರಹಳ್ಳಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಸಾದ್‌ ಬಂಧಿತ ಆರೋಪಿಯಾಗಿದ್ದಾನೆ. ಯುವತಿಯೊಬ್ಬಳು ನೀಡಿದ ದೂರಿನ ಆಧಾರದಲ್ಲಿ ಇನ್ಸ್ ಪೆಕ್ಟರ್ ನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರು ಕೊಟ್ಟ ಯುವತಿ ಹಾಗೂ ಪ್ರಸಾದ್‌ ಅವರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಗೊತ್ತಾಗಿದೆ. ದೈಹಿಕ ಸಂಬಂಧವನ್ನೂ ಹೊಂದಿದ್ದರು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಪ್ರಸಾದ್‌ ಅವರು ಕೆಲವು ತಿಂಗಳ ಕಾನ್‌ಸ್ಟೆಬಲ್‌ ಆಗಿ ನೇಮಕಗೊಂಡಿದ್ದರು. ಆ ಬಳಿಕ ಯುವತಿಯಿಂದ ದೂರವಾಗಿದ್ದರು ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ