ಎಸ್ಸಿ-ಎಸ್ಟಿ ಅನುದಾನ ಕಡಿತ ಖಂಡನೀಯ | ಸರ್ಕಾರದ ಸರ್ವಾಧಿಕಾರಕ್ಕೆ ಜನ ತಕ್ಕ ಪಾಠ ಕಲಿಸುತ್ತಾರೆ | ಸತೀಶ್ ಜಾರಕಿಹೊಳಿ - Mahanayaka

ಎಸ್ಸಿ-ಎಸ್ಟಿ ಅನುದಾನ ಕಡಿತ ಖಂಡನೀಯ | ಸರ್ಕಾರದ ಸರ್ವಾಧಿಕಾರಕ್ಕೆ ಜನ ತಕ್ಕ ಪಾಠ ಕಲಿಸುತ್ತಾರೆ | ಸತೀಶ್ ಜಾರಕಿಹೊಳಿ

25/12/2020

ಬೆಂಗಳೂರು: ಬಿಜೆಪಿ ಸರಕಾರವು ವಿರೋಧ ಪಕ್ಷಗಳನ್ನು ಗಣನೆಗೆ ತೆಗೆದುಕೊಳ್ಳದೆ. ಮನಬಂದಂತೆ ಕಾಯ್ದೆಗಳನ್ನು ಜಾರಿ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಕ್ರೋಶ ವ್ಯಪಡಿಸಿದರು.  

ಮಾಧ್ಯಮಗಳ ಜೊತೆಗೆ ಈ ಬಗ್ಗೆ ಮಾತನಾಡಿದ ಅವರು,  ಎಸ್ಸಿ-ಎಸ್ಟಿ ಅನುದಾನವನ್ನು ಕಡಿತ ಮಾಡಿ ಬೇರೆ ಉದ್ದೇಶಗಳಿಗೆ ಆ ಹಣವನ್ನು ಬಳಕೆ ಮಾಡುವ ರಾಜ್ಯ ಸರ್ಕಾರದ ನಿರ್ಧಾರ ಖಂಡನೀಯವಾಗಿದೆ.  ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಬಿಜೆಪಿಯು ಜನರಿಗೆ ಮೋಸ ಮಾಡುತ್ತಿದೆ. ಹಲವು ಹಗರಣಗಳ ಸರಕಾರ ಬಿಜೆಪಿ ಸರಕಾರ ವಾಗಿದೆ. ಸಿಎಂ ಯಡಿಯೂರಪ್ಪನವರ ಮೇಲೆ ಡಿ ನೋಟಿಫಿಕೇಶನ್ ಹಗರಣವಿದೆ. ಇನ್ನುಳಿದ ಹಲವರ ವಿರುದ್ಧ ಸರಕಾರದಲ್ಲಿ ನಡೆದ ಹಗರಣಗಳಲ್ಲಿ ಬಿಜೆಪಿ ಹಲವು ನಾಯಕರು ಸೇರ್ಪಡೆಗೊಂಡಿದ್ದಾರೆ ಎಂದು ಅವರು ಟೀಕಿಸಿದರು.

ಸಿಎಂ ಯಡಿಯೂರಪ್ಪ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವಾದರೆ ಬಿಜೆಪಿ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವುದಾಗಿ ಈಗಾಗಲೇ ಕಾಂಗ್ರೆಸ್ ಹೇಳಿದೆ ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ