ಮಂಗಳೂರಿನ ಉಳ್ಳಾಲದಲ್ಲಿ ಸಾವರ್ಕರ್ ಫ್ಲೆಕ್ಸ್ ಹಾಕಿದ ಮುಸ್ಲಿಮ್ ಮುಖಂಡ!

ಮಂಗಳೂರು: ಕೋಮು ಸೂಕ್ಷ್ಮ ಪ್ರದೇಶ ಮಂಗಳೂರಿನ ಉಳ್ಳಾಲದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಲ್ಲಿ ಗುರುತಿಸಿಕೊಂಡಿರುವ ಮುಸ್ಲಿಂ ಮುಖಂಡರೊಬ್ಬರು ಬಹಿರಂಗವಾಗಿಯೇ ಸಾವರ್ಕರ್ ಪರವಾಗಿ ಫ್ಲೆಕ್ಸ್ ಹಾಕಿದ್ದು ತದನಂತರ ಪೊಲೀಸರು ಅದನ್ನು ತೆರವಿಗೊಳಿಸಿದ ಘಟನೆ ನಡೆದಿದೆ.
ವಿಪಕ್ಷ ಉಪನಾಯಕ ಯು.ಟಿ.ಖಾದರ್ ಪ್ರತಿನಿಧಿಸುತ್ತಿರುವ ಮುಸ್ಲಿಂ ಬಾಹುಳ್ಯದ ಮಂಗಳೂರು ವಿಧಾನಸಭಾ ಕ್ಷೇತ್ರದ ಎರಡು ಕಡೆ ಸಾವರ್ಕರ್ ಪರವಾಗಿ ಫ್ಲೆಕ್ಸ್ ಹಾಕಲಾಗಿದೆ. ದೇರಳಕಟ್ಟೆ ಮತ್ತು ಅಸೈಗೋಳಿಯಲ್ಲಿ ಬೃಹತ್ ಪೋಸ್ಟರ್ ಹಾಕಿದ್ದು, ಸಾವರ್ಕರ್ ಅವರಿಗೆ ನಮನಗಳು ಎಂದು ಬರೆದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಎ.ಆರ್. ಫಝಲ್ ಫ್ಲೆಕ್ಸ್ ಹಾಕಿದ್ದರು.
ದೇರಳಕಟ್ಟೆ ಮುಸ್ಲಿಂ ಬಾಹುಳ್ಯದ ಪ್ರದೇಶವಾಗಿದ್ದರೆ, ಅಸೈಗೋಳಿಯಲ್ಲಿ ಎರಡೂ ಸಮುದಾಯದ ಜನರು ಇದ್ದಾರೆ. ಎರಡೂ ಕಡೆ ಫ್ಲೆಕ್ಸ್ ಕಂಡುಬಂದಿದ್ದು ಕೆಲವರಿಂದ ವಿರೋಧವೂ ವ್ಯಕ್ತವಾಗಿತ್ತು. ಆದರೆ ಈ ರೀತಿ ಫ್ಲೆಕ್ಸ್ ಹಾಕಿದ ಬೆನ್ನಲ್ಲೇ ಕೊಣಾಜೆ ಪೊಲೀಸರು ದೇರಳಕಟ್ಟೆಯಲ್ಲಿ ಹಾಕಿದ್ದ ಫ್ಲೆಕ್ಸನ್ನು ತೆರವುಗೊಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka