ನಾನು ಬೇಸಿಕಲಿ ಸಾವರ್ಕರ್ ವಾದಿ ಅಲ್ಲ, ಅಂಬೇಡ್ಕರ್ ವಾದಿ: ಎನ್.ಮಹೇಶ್ - Mahanayaka

ನಾನು ಬೇಸಿಕಲಿ ಸಾವರ್ಕರ್ ವಾದಿ ಅಲ್ಲ, ಅಂಬೇಡ್ಕರ್ ವಾದಿ: ಎನ್.ಮಹೇಶ್

n mahesh
26/08/2022


Provided by

ಚಾಮರಾಜನಗರ:  ನಾನು ಬೇಸಿಕಲಿ ಸಾವರ್ಕರ್ ವಾದಿ ಅಲ್ಲ, ನಾನು ಅಂಬೇಡ್ಕರ್ ವಾದಿ. ಅಂಬೇಡ್ಕರ್ ವಾದಿ ದೃಷ್ಟಿಕೋನದಲ್ಲಿ ವೀರ ಸಾವರ್ಕರ್ ಅವರನ್ನು ನೋಡುವಂತಹ ಅಧ್ಯಯನ ಮಾಡುವಂತಹ ಕೆಲಸವನ್ನು ಶುರು ಮಾಡಿದ್ದೇನೆ ಎಂದು ಮಾಜಿ ಸಚಿವ, ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಹೇಳಿದರು.


Provided by

ಚಾಮರಾಜನಗರದಲ್ಲಿ ಸಾವರ್ಕರ್ ರಥಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾವರ್ಕರ್ 82—83 ವರ್ಷ ಬದುಕಿದ್ದರು. ಅವರ ಜೀವಿತಾವಧಿಯಲ್ಲಿ 50 ವರ್ಷಗಳ ಕಾಲ ಬ್ರಿಟೀಷರಿಂದ ಜೈಲು ಶಿಕ್ಷೆ ಅನುಭವಿಸಿದ್ದರು. 50 ವರ್ಷಗಳ ಕಾಲ ಯಾಕೆ ಬ್ರಿಟೀಷರು ಶಿಕ್ಷೆ ನೀಡಿದ್ದರು ಎನ್ನುವುದನ್ನು ನಾವು ಯೋಚಿಸಬೇಕಿದೆ ಎಂದರು.

ಸಿಪಾಯಿ ದಂಗೆಯನ್ನು ಮೊದಲ ಸ್ವಾತಂತ್ರ್ಯ ಹೋರಾಟ ಎಂದು ಬರೆದಿದ್ದ ಸಾವರ್ಕರ್  ಇಂಗ್ಲೆಂಡ್ ನಲ್ಲಿರುವಾಗ ಇಂಡಿಯಾ ಹೌಸ್ ಎಂಬ ಕ್ರಾಂತಿಕಾರಿ ಸಂಘ ಕಟ್ಟಿಕೊಂಡಿದ್ದರು. ಬ್ರಿಟೀಷರ ವಿರುದ್ಧ ಹೋರಾಟ ಮಾಡಿ ದೇಶದಿಂದ ಆಚೆ ಕಳುಹಿಸಬೇಕು ಎನ್ನುವ ನಿರ್ಣಯ ಮಾಡಲಾಗಿತ್ತು. ಈ ಕಾರಣಕ್ಕಾಗಿ ಅವರನ್ನು ಬ್ರಿಟೀಷರು ಬಂಧಿಸಿ ಅಂಡಮಾನ್ ನಿಕೋಬಾರ್ ನಲ್ಲಿರುವ ಜೈಲಿಗೆ ಕಳುಹಿಸುತ್ತಾರೆ ಎಂದರು.


Provided by

ಸಾವರ್ಕರ್ ಇದ್ದ ಜೈಲು ಅತ್ಯಂತ ಕಠಿಣವಾಗಿತ್ತು. ಒಂದು ಸಣ್ಣ ಕೋಣೆ ಬಿಟ್ಟರೆ ಬೇರೇನೂ ಅಲ್ಲಿ ಇರಲಿಲ್ಲ. ಮೂತ್ರ ವಿಸರ್ಜನೆ ಮಾಡಬೇಕಾದರೂ ಅಲ್ಲೇ ಮಾಡಬೇಕಿತ್ತು. ಇಷ್ಟೊಂದು ಕಠಿಣವಾದ ಶಿಕ್ಷೆಯನ್ನು ಅವರಿಗೆ ನೀಡಲಾಗಿತ್ತು ಎಂದು ಎನ್.ಮಹೇಶ್ ಹೇಳಿದರು.

ಸಾವರ್ಕರ್ ಅತ್ಯಂತ ಅಪಾಯಕಾರಿ ವ್ಯಕ್ತಿ ಅಂತ ಅನ್ನಿಸಿದ್ರಿಂದಾಗಿ ಸಾವರ್ಕರ್‍ ಅವರಿಗೆ ಅಷ್ಟೊಂದು ಕಠಿಣ ಶಿಕ್ಷೆ ನೀಡಲಾಗಿತ್ತು ಎಂದು ಎನ್.ಮಹೇಶ್ ಅಭಿಪ್ರಾಯಪಟ್ಟರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ