60 ವರ್ಷದ ವೃದ್ಧರನ್ನು 25ರ ಯುವಕರಾಗಿ ಮಾಡುವುದಾಗಿ ನಂಬಿಸಿ ವಂಚನೆ: ನೂರಾರು ವೃದ್ಧರು ಲಕ್ಷಾಂತರ ಹಣ ನಾಮ
ಲಕ್ನೋ: 60 ವರ್ಷದ ವೃದ್ಧರನ್ನು ಚಿಕಿತ್ಸೆಯ ಮೂಲಕ 25 ವರ್ಷದ ಯುವಕರನ್ನಾಗಿ ಮಾಡುವುದಾಗಿ ಹೇಳಿ ನೂರಾರು ವೃದ್ಧರನ್ನು ವಂಚಿಸಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ರಾಜೀವ್ ಕುಮಾರ್ ದುಬೆ ಮತ್ತು ಆತನ ಪತ್ನಿ ರಶ್ಮಿ ದುಬೆ 60ರ ವೃದ್ಧರನ್ನು ವಂಚಿಸಿದವರು ಎಂದು ತಿಳಿದು ಬಂದಿದೆ. ವೃದ್ಧರಿಗೆ 35 ಕೋಟಿ ರೂಪಾಯಿ ವಂಚಿಸಿರುವುದಾಗಿ ಹೇಳಲಾಗಿದೆ.
ರಾಜೀವ್ ಕುಮಾರ್ ದುಬೆ ಮತ್ತು ಆತನ ಪತ್ನಿ ರಶ್ಮಿ ದುಬೆ ಇಬ್ಬರೂ ಕಾನ್ಪುರದಲ್ಲಿ ಥೆರಪಿ ಸೆಂಟರ್ ನ್ನು ತೆರದಿದ್ದರು. ಬಳಿಕ ಇಸ್ರೇಲ್ ನಿಂದ ತರಲಾದ ಯಂತ್ರವನ್ನು ಬಳಸಿ 60 ವರ್ಷದ ವ್ಯಕ್ತಿಯನ್ನು 25 ವರ್ಷ ವಯಸ್ಸಿನವರನ್ನಾಗಿ ಪರಿವರ್ತಿಸುತ್ತೇವೆ ಎಂದು ವೃದ್ಧರನ್ನು ನಂಬಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಒಬ್ಬೊಬ್ಬ ವೃದ್ಧರಿಂದ ಸುಮಾರು 1.75 ಲಕ್ಷ ರೂಪಾಯಿ ಪಡೆದು ವಂಚಿಸಲಾಗಿದೆ. ಹೀಗೆ ನೂರಾರು ವೃದ್ಧರನ್ನು ವಂಚಿಸಲಾಗಿದ್ದು, ನೂರಾರು ವೃದ್ಧರಿಗೆ 35 ಕೋಟಿ ರೂಪಾಯಿ ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ.
ಸದ್ಯ ಕೋಟಿಗಟ್ಟಲೆ ಹಣ ವಂಚನೆ ಮಾಡಿರು ದಂಪತಿ ತಲೆಮರೆಸಿಕೊಂಡಿದ್ದಾರೆ. ಅವರು ವಿದೇಶಕ್ಕೆ ಪರಾರಿಯಾಗಿರುವ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: