ಪ್ರವಾಸಕ್ಕೆ ಬಂದಿದ್ದ ಶಾಲಾ ಮಕ್ಕಳ ವ್ಯಾನ್ ಪಲ್ಟಿ: 5 ಮಕ್ಕಳಿಗೆ ಗಾಯ - Mahanayaka
11:50 PM Wednesday 22 - January 2025

ಪ್ರವಾಸಕ್ಕೆ ಬಂದಿದ್ದ ಶಾಲಾ ಮಕ್ಕಳ ವ್ಯಾನ್ ಪಲ್ಟಿ: 5 ಮಕ್ಕಳಿಗೆ ಗಾಯ

chikkamagaluru
21/12/2024

ಚಿಕ್ಕಮಗಳೂರು: ಪ್ರವಾಸಕ್ಕೆ ಬಂದಿದ್ದ ಶಾಲಾ ಮಕ್ಕಳ ವ್ಯಾನ್ ಪಲ್ಟಿಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕೈಮರ ಚೆಕ್ ಪೋಸ್ಟ್ ಬಳಿ ನಡೆದಿದೆ.

ಘಟನೆಯಲ್ಲಿ 12 ಜನ ಮಕ್ಕಳಲ್ಲಿ 5 ಜನ ಮಕ್ಕಳಿಗೆ ಗಾಯವಾಗಿದೆ. ಮೈಸೂರಿನ ಗೋಪಾಲಸ್ವಾಮಿ ಶಾಲೆಯ ಮಕ್ಕಳು ಮುಳ್ಳಯ್ಯನಗಿರಿಗೆ ಪ್ರವಾಸಕ್ಕೆ ಹೊರಟಿದ್ದರು. ಮೈಸೂರಿನಿಂದ ಸರ್ಕಾರಿ ಬಸ್ ನಲ್ಲಿ ಬಂದಿದ್ದ ಮಕ್ಕಳು, ಚಿಕ್ಕಮಗಳೂರಿನಲ್ಲಿ ಟ್ರ್ಯಾಕ್ ಗಾಡಿಯನ್ನ ಬಾಡಿಗೆ ಮಾಡಿಕೊಂಡಿದ್ದರು.

ಕೈಮರ ಚೆಕ್ ಪೋಸ್ಟ್ ಬಳಿ ಟೈರ್ ಬ್ಲಾಸ್ಟ್ ಆಗಿ ಅನಾಹುತ ಸಂಭವಿಸಿದೆ. ತಕ್ಷಣವೇ ಮಕ್ಕಳನ್ನ ಬೇರೆ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ. ಮುಳ್ಳಯ್ಯನಗಿರಿಯ ಎತ್ತರದ ಪ್ರದೇಶದಲ್ಲಿ ಈ ಘಟನೆಯಾಗಿದ್ರೆ ದೊಡ್ಡ ಅನಾಹುತವಾಗುತ್ತಿತ್ತು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

ಇತ್ತೀಚಿನ ಸುದ್ದಿ