450 ದಿನಗಳ ಜೈಲುವಾಸದ ಬಳಿಕ ತಮಿಳುನಾಡು ಕ್ಯಾಬಿನೆಟ್ ಗೆ ಮರಳಿದ ಸೆಂಥಿಲ್ ಬಾಲಾಜಿ
ಉದ್ಯೋಗಕ್ಕಾಗಿ ನಗದು ಪ್ರಕರಣಕ್ಕೆ ಸಂಬಂಧಿಸಿದಂತೆ 450 ದಿನಗಳ ಜೈಲುವಾಸದ ನಂತರ ಇತ್ತೀಚೆಗೆ ಜೈಲಿನಿಂದ ಹೊರಬಂದ ಡಿಎಂಕೆ ಹಿರಿಯ ಮುಖಂಡ ವಿ.ಸೆಂಥಿಲ್ ಬಾಲಾಜಿ ಅವರು ಭಾನುವಾರ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ತಮಿಳುನಾಡು ಕ್ಯಾಬಿನೆಟ್ ನಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಲ್ಲದೇ, ಗೋವಿ ಚೆಜಿಯಾನ್, ಆರ್ ರಾಜೇಂದ್ರನ್ ಮತ್ತು ಎಸ್ ಎಂ ನಾಸರ್ ಅವರು ಎಂ.ಕೆ.ಸ್ಟಾಲಿನ್ ನೇತೃತ್ವದ ಕ್ಯಾಬಿನೆಟ್ ನಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಆರ್.ಎನ್.ರವಿ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಸೆಂಥಿಲ್ ಬಾಲಾಜಿ ಅವರಿಗೆ ಎಂ.ಕೆ.ಸ್ಟಾಲಿನ್ ಸರ್ಕಾರದಲ್ಲಿ ವಿದ್ಯುತ್, ಅಬಕಾರಿ ಮತ್ತು ನಿಷೇಧ ಖಾತೆಗಳನ್ನು ವಹಿಸಲಾಯಿತು. ದಲಿತ ನಾಯಕ ಗೋವಿ ಚೆಜಿಯನ್ ನೂತನ ಉನ್ನತ ಶಿಕ್ಷಣ ಸಚಿವರಾಗಲಿದ್ದು, ಆರ್.ರಾಜೇಂದ್ರನ್ ಅವರಿಗೆ ಪ್ರವಾಸೋದ್ಯಮ ಖಾತೆ ನೀಡಲಾಗಿದೆ.
ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಅನಿವಾಸಿ ತಮಿಳರ ಕಲ್ಯಾಣ ಇಲಾಖೆಯನ್ನು ಎಸ್.ಎಂ.ನಾಸರ್ ನೋಡಿಕೊಳ್ಳಲಿದ್ದಾರೆ. ಪಶ್ಚಿಮ ತಮಿಳುನಾಡು ಪ್ರದೇಶದ ಪ್ರಭಾವಿ ಡಿಎಂಕೆ ನಾಯಕ ಸೆಂಥಿಲ್ ಬಾಲಾಜಿ 471 ದಿನಗಳ ಜೈಲುವಾಸದ ನಂತರ ಪುಝಲ್ ಕೇಂದ್ರ ಕಾರಾಗೃಹದಿಂದ ಹೊರಬಂದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth