ಮಗುವಿನ ಕಣ್ಣಿಗೆ ಬೆಳಕು ನೀಡಲು ದಾನಿಗಳಲ್ಲಿ ಅಸಹಾಯಕ ಪೋಷಕರ ಮನವಿ
ಕೊಟ್ಟಿಗೆಹಾರ: ಸಮೀಪದ ದೇವನಗೂಲ್ ಗ್ರಾಮದ ನಯನಾ ಆಚಾರ್ಯ ಅವರ ಒಂದು ವರ್ಷದ ಮಗಳು ತಪಸ್ಯಾಗೆ ಒಂದು ಕಣ್ಣು ಕುರುಡಾಗಿದ್ದು, ಅದಕ್ಕೆ ಬೆಳಕು ತುಂಬಲು ಉದಾರ ದಾನಿಗಳಿಂದ ಅಸಹಾಯಕ ಪೋಷಕರು ನೆರವಿನ ಹಸ್ತ ಚಾಚಿದ್ದಾರೆ.
ಹೆಣ್ಣು ಮಗು ತಪಸ್ಯಾ ಹುಟ್ಟಿನಿಂದಲೇ ಒಂದು ಕಣ್ಣು ಕುರುಡಾಗಿದೆ. ಮಗು ಚಿಕ್ಕದಾಗಿದ್ದರಿಂದ ಇದು ಪೋಷಕರಿಗೂ ತಿಳಿದಿರಲಿಲ್ಲ. ಬಳಿಕ ದಿನ ಕಳೆದಂತೆ ಮಗುವಿನ ಕಣ್ಣಿನ ಮಧ್ಯ ಭಾಗ ಬಿಸಿ ಬಣ್ಣಕ್ಕೆ ತಿರುಗಿದೆ.
ಪೋಷಕರು ಮೂಡಿಗೆರೆ ಆಸ್ಪತ್ರೆಗೆ ಹೋಗಿ ವೈದ್ಯರಲ್ಲಿ ತೋರಿಸಿ ಒಮ್ಮೆ ಸ್ಕ್ಯಾನಿಂಗ್ ಮಾಡಿಸಿದ್ದಾರೆ. ಆಗ ಪೋಷಕರಿಗೆ ತಿಳಿಯಿತು, ಮಗುವಿನ ಒಂದು ಕಣ್ಣು ಭವಿಷ್ಯದ ಜೀವನಕ್ಕೆ ಬೆಳಕು ನೀಡುತ್ತಿಲ್ಲ ಎಂಬ ಅಂಶ ಬಯಲಾಗಿದೆ.
ಈ ವಿಷಯವನ್ನು ಕೇಳಿ ಮಗುವಿನ ತಾಯಿ ನಯನಾಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ. ಮಂಗಳೂರಿನ ಖಾಸಗಿ ಕಣ್ಣಿನ ಆಸ್ಪತ್ರೆಗೆ ತೋರಿಸಿದಾಗ ವೈದ್ಯರು ಮಗುವಿಗೆ ಒಂದು ಕಣ್ಣು ಬದಲಾವಣೆ ಮಾಡಬೇಕು. ಸುಮಾರು 10 ಲಕ್ಷ ಬೇಕಾಗಬಹುದು. ಬೆಂಗಳೂರು ಆಸ್ಪತ್ರೆಗೆ ಹೋಗಿ ದಾಖಲಿಸಿ ಎಂದು ಸಲಹೆ ನೀಡಿದ್ದಾರೆ.
ಆದರೆ 10 ಲಕ್ಷ ಹೊಂದಿಸುವುದೇ ಬಡ ಕುಟುಂಬದಿಂದ ಬಂದ ಪೋಷಕರಿಗೆ ಸವಾಲಾಗಿದೆ. ಏನು ಮಾಡಬೇಕೆಂದು ತೋಚದ ಪೋಷಕರು ಉದಾರ ದಾನಿಗಳಲ್ಲಿ ಹೆಣ್ಣು ಮಗುವಿನ ಕಣ್ಣಿನ ಬೆಳಕಿಗೆ(ಕಾರ್ನಿಯಲ್ ಕಣ್ಣಿನ ಕಶಿ) ನೆರವಾಗಬೇಕೆಂದು ಪತ್ರಿಕೆಯ ಮುಂದೆ ಅಳಲು ತೋಡಿಕೊಂಡರು.
ಉದಾರ ದಾನ ನೀಡುವ ದಾನಿಗಳು ಕೆಳಗಿನ ಬ್ಯಾಂಕ್ ಖಾತೆಗೆ ಅಥವಾ ಮೊಬೈಲ್ ಸಂಖ್ಯೆಗೆ ಫೋನ್ ಪೇ ಮೂಲಕ ಆರ್ಥಿಕ ಸಹಾಯ ನೀಡಬೇಕೆಂದು ಕೋರಿಕೊಂಡಿದ್ದಾರೆ. 7760080450 /8762362472 ಸಂಖ್ಯೆಗೆ ಅಥವಾ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ : 110052456009, ಐಎಫ್ ಎಸ್ ಸಿ ಕೋಡ್: ಸಿಎನ್ ಆರ್ ಬಿ0010911 ಸಹಾಯ ಮಾಡಬಹುದು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: