ಸೆ.29 ಮಹಿಷ ಅರಸಗೆ ಮಂಡಲೋತ್ಸವ: ಪ್ರತಿ ವರ್ಷದಂತೆ ಈ ಬಾರಿಯೂ ಸವಾಲು ಹಾಕಿದ ಪ್ರತಾಪ್ ಸಿಂಹ! - Mahanayaka

ಸೆ.29 ಮಹಿಷ ಅರಸಗೆ ಮಂಡಲೋತ್ಸವ: ಪ್ರತಿ ವರ್ಷದಂತೆ ಈ ಬಾರಿಯೂ ಸವಾಲು ಹಾಕಿದ ಪ್ರತಾಪ್ ಸಿಂಹ!

mahisha king
28/09/2024

ಮೈಸೂರು:  ಸೆ.29ರಂದು ಮಹಿಷ ಮಂಡಲೋತ್ಸವ ಆಚರಣೆ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶ ನಿರ್ಬಂಧ ಹೇರಲಾಗಿದೆ.


Provided by

ನಾಳೆ ಮಧ್ಯಾಹ್ನದವರೆಗೂ ಚಾಮುಂಡೇಶ್ವರಿ ದರ್ಶನಕ್ಕೆ ಅವಕಾಶವಿರುವುದಿಲ್ಲ, ದಸರಾ ಹಿನ್ನೆಲೆ ಸದ್ಯ ಮಹಿಷಾ ಅರಸರ ಪ್ರತಿಮೆಗೆ ಬಣ್ಣ ಬಳಿಯುವ ಕೆಲಸ ನಡೆಯುತ್ತಿದ್ದು, ಬಣ್ಣ ಬಳಿಯುವ ತನಕ ಬಟ್ಟೆ ಹೊದಿಕೆ ಹಾಕಲಾಗಿದೆ ಎನ್ನಲಾಗಿದೆ.

ಮೈಸೂರು ನಗರದಲ್ಲಿ ಮಹಿಷ ದಸರಾ ಆಚರಣೆ ಮಾಡಲು ಮಹಿಷಾ ದಸರಾ ಆಚರಣಾ ಸಮಿತಿ ಸಿದ್ಧತೆ ಮಾಡಿಕೊಂಡಿದೆ. ಈ ಮಧ್ಯೆ ಮಹಿಷಾ ದಸರಾಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿ ವರ್ಷದಂತೆ ಈ ವರ್ಷವೂ ವಿರೋಧ ವ್ಯಕ್ತಪಡಿಸಿದ್ದಾರೆ.

ಮಹಿಷ ಅರಸಗೆ ಪುಷ್ಪಾರ್ಚನೆ ಮಾಡುವ ವಿಚಾರವನ್ನು ಟೀಕಿಸಿರುವ ಪ್ರತಾಪ್ ಸಿಂಹ, ಮಹಿಷನಿಗೆ ಪುಷ್ಪಾರ್ಚನೆ? ಬನ್ನಿ ನೋಡೇ ಬಿಡೋಣ ಎಂದು ಮಹಿಷ ಅರಸರ ಭಕ್ತರಿಗೆ ಸವಾಲು ಹಾಕಿದ್ದಾರೆ.

ಮಹಿಷ ಮಂಡಲೋತ್ಸವ ವಿಚಾರವಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಮಾತನಾಡಿ, ಯಾರು ಬೇಕಾದರೂ, ಯಾವ ತೊಂದರೆಯಾಗದಂತೆ ಅವರ ಧಾರ್ಮಿಕ ಆಚರಣೆ ಮಾಡಿಕೊಳ್ಳಬಹುದು. ಆದರೆ, ಕಾನೂನು ಸುವ್ಯವಸ್ಥೆಗೆ ದಕ್ಕೆ ಆಗಬಾರದು ಎಂದು ಸೂಚನೆ ನೀಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ