ಅರ್ಥವಾಗದ ಕಂಪ್ಯೂಟರ್ ಭಾಷೆಯಿಂದ ಉಡುಪಿ ಜನತೆ ಸಮಸ್ಯೆಯ ಸುಳಿಯಲ್ಲಿ: ರಮೇಶ್ ಕಾಂಚನ್ ಆಕ್ರೋಶ - Mahanayaka
10:14 AM Thursday 12 - December 2024

ಅರ್ಥವಾಗದ ಕಂಪ್ಯೂಟರ್ ಭಾಷೆಯಿಂದ ಉಡುಪಿ ಜನತೆ ಸಮಸ್ಯೆಯ ಸುಳಿಯಲ್ಲಿ: ರಮೇಶ್ ಕಾಂಚನ್ ಆಕ್ರೋಶ

ramesh kanchan
17/11/2022

ಸಾಮಾನ್ಯ ಜನತೆಯ ಊಹೆಗೆ ಮೀರಿದ “ಸರ್ವರ್ ಸಮಸ್ಯೆ” ಯಂತಹ ಹಲವಾರು ಕಂಪ್ಯೂಟರ್ ಆಧಾರಿತ ಸಮಸ್ಯೆಗಳಿಂದ ಕಳೆದ ಹದಿನೈದು ದಿನಗಳಿಂದ ತೊಂದರೆಯಾಗುತ್ತಿದ್ದು ಸದ್ರಿ ಸಮಸ್ಯೆಗೆ ಸರಿಯಾದ ಉತ್ತರ ನೀಡುವಲ್ಲಿ ಉಡುಪಿ ನಗರಸಭೆ, ಉಡುಪಿ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ವಿಫಲವಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರಕಾರವು ಜಿಲ್ಲಾಡಳಿತದ ಮುಖಾಂತರ ಸರಕಾರದ ಕಾರ್ಯಕ್ರಮಗಳ ಪ್ರಚಾರ ಕಾರ್ಯಕ್ರಮಗಳಲ್ಲಿ ಆಡಳಿತ ಯಂತ್ರವನ್ನು ದುರುಪಯೋಗ ಪಡೆಸುತ್ತಿದೆ. ಇದರಿಂದಾಗಿ ನಗರಸಭೆಯ ಸಿಬ್ಬಂದಿಗಳು ತಮ್ಮ ನಗರಸಭೆಯ ಕೆಲಸದ ಸಮಯದಲ್ಲಿ ನಗರಸಭೆಯ ಅಥವಾ ಜನತೆಯ ಕಾರ್ಯಗಳನ್ನು ಕ್ಲಿಪ್ತ ಸಮಯದಲ್ಲಿ ನಿಭಾಯಿಸಲು ಕಷ್ಟವಾಗುತ್ತಿದೆ. ಮನೆ ಕಟ್ಟಲು ಅನುಮತಿ ಮತ್ತು ಇ-ಖಾತಾ ವಿತರಣೆಯ ವಿಳಂಬದಿಂದ ಜನತೆ ಅತೀವ ತೊಂದರೆಯನ್ನೂ ಅನುಭವಿಸುತ್ತಿದ್ದಾರೆ. ವಿಳಂಬಕ್ಕೆ ಕಾರಣ ಕೇಳಿದರೆ ನೆಟ್‌ವರ್ಕ್ ಸಮಸ್ಯೆ, ಸರ್ವರ್ ಇಲ್ಲ ಮುಂತಾದ ಸಾಮಾನ್ಯ ಜನತೆಗೆ ಅರ್ಥವಾಗದಂತಹ ಕಾರಣಗಳನ್ನು ಹೇಳಿ ಹಿಂದೆ ಕಳುಹಿಸಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಣ್ಣ ಸಣ್ಣ ವಿಚಾರಗಳಿಗೆ ಮತ್ತು ವಿಷಯಗಳಿಗೆ ಫೊಟೋ ಮತ್ತು ಸುದ್ದಿ ಪ್ರಕಟಿಸುವ ಆಡಳಿತ ಪಕ್ಷ/ನಗರಸಭೆಯು ಈ ವಿಚಾರದಲ್ಲಿ ಸುದ್ದಿವಾಹಿನಿಗಳಿಗೆ ಸತ್ಯ ಸಂಗತಿಯನ್ನು ಪತ್ರಿಕಾ ಪ್ರಕಟನೆ ಮೂಲಕ ತಿಳಿಸಬಹುದಿತ್ತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹತ್ತು ದಿನಗಳಾದರೂ ಈ ನಿಟ್ಟಿನಲ್ಲಿ ಸುದ್ದಿವಾಹಿನಿಗಳ ಮೂಲಕ ಸಮಸ್ಯೆಯನ್ನು ತಿಳಿಸದೇ ಇರುವುದನ್ನು ನೋಡಿದಾಗ ಈ ವಿಚಾರದಲ್ಲಿ ಏನಾದರೂ ಒಳಗುಟ್ಟಿದೆಯೇ…?  ಆಡಳಿತ ಪಕ್ಷ ಆಡಳಿತದ ಕಡೆಗೆ ಗಮನ ಹರಿಸದೇ ರಾಜಕೀಯದೆಡೆಗೆ ಹೆಚ್ಚು ಗಮನ ನೀಡುತ್ತಿರುವಂತೆ ಭಾಸವಾಗುತ್ತಿದೆ.  ಇದು ಜನತೆಯ ಸಾಮಾನ್ಯ ಆಶಯಗಳಿಗೆ ತೊಂದರೆಯನ್ನೂ ನೀಡುತ್ತಿದೆ ಎಂದು ಅವರು ಹೇಳಿದ್ದಾರೆ.

ನಗರಸಭೆಯ ಕಚೇರಿಗೆ ಮನೆ ಕಟ್ಟಲು ಅನುಮತಿ ಮತ್ತು ಇ-ಖಾತಾ ಪಡೆಯಲು ನೂರಾರು ಬಾರಿ ಬಂದು ಹೋಗುತ್ತಿರುವ ಜನತೆಗೆ ಕೂಡಲೇ ಸದ್ರಿ ಸಮಸ್ಯೆಯಿಂದ ಮುಕ್ತಿಯನ್ನು ನೀಡಬೇಕೆಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ