ಪ್ರಧಾನಿಯಿಂದಲೇ ಪ್ರಚಾರದ ವೇಳೆ ನಿಯಮ ಉಲ್ಲಂಘನೆ..? ಬಿಜೆಪಿಗೆ ತಲೆನೋವಾದ ಸೀತಾರಾಂ ಯೆಚೂರಿ ಆರೋಪ - Mahanayaka
11:48 PM Wednesday 10 - December 2025

ಪ್ರಧಾನಿಯಿಂದಲೇ ಪ್ರಚಾರದ ವೇಳೆ ನಿಯಮ ಉಲ್ಲಂಘನೆ..? ಬಿಜೆಪಿಗೆ ತಲೆನೋವಾದ ಸೀತಾರಾಂ ಯೆಚೂರಿ ಆರೋಪ

18/04/2024

‘ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸುವ ಹೇಳಿಕೆ ನೀಡಿದ್ದಾರೆ’ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಆರೋಪಿಸಿದ್ದಾರೆ.

ರಾಮನ ವಿಚಾರದಲ್ಲಿ ಕೋಮು ಧ್ರುವೀಕರಣ ಚುರುಕುಗೊಳಿಸುವ ಉದ್ದೇಶದಿಂದ ಮೋದಿ ನೀಡಿರುವ ಹೇಳಿಕೆಗಳನ್ನು ಪಟ್ಟಿ ಮಾಡಿ ಚುನಾವಣಾ ಆಯೋಗಕ್ಕೆ ದೂರು ನೀಡಿರುವುದಾಗಿ ಯೆಚೂರಿ ಹೇಳಿದ್ದಾರೆ.
ಉತ್ತರ ಕೇರಳ ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸೀತಾರಾಮ್ ಯಚೂರಿ , ಸಿಪಿಎಂ ಪಕ್ಷವು ಮೋದಿ ಮತ್ತು ಬಿಜೆಪಿಯನ್ನು ವಿರೋಧಿಸುತ್ತಿಲ್ಲ ಎಂದು ಎಡರಂಗವನ್ನು ಆರೋಪಿಸಿದ್ದಕ್ಕಾಗಿ ಕಾಂಗ್ರೆಸ್-ಯುಡಿಎಫ್ ಟೀಕಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬಂಧನಕ್ಕೊಳಗಾದ ಮೊದಲ ರಾಜಕೀಯ ನಾಯಕರಲ್ಲಿ ನಮ್ಮವರು ಒಬ್ಬರು. 370ನೇ ವಿಧಿಯ ನಂತರ ಕಾಶ್ಮೀರದಲ್ಲಿ ರಾಜಕಾರಣಿಗಳ ಬಂಧನದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು ಎಡ ಪಕ್ಷ. ಉನ್ನತ ನ್ಯಾಯಾಲಯದಲ್ಲಿ ಚುನಾವಣಾ ಬಾಂಡ್‌ಗಳನ್ನು ವಿರೋಧಿಸಿದ ಮೊದಲಿಗರು ಸಿಪಿಐ (ಎಂ) ಎಂದು ಹೇಳಿದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ