ಶವ ಸುಡಲು 4 ಎಕರೆ ಸ್ಥಳಾವಕಾಶದ ವ್ಯವಸ್ಥೆ ಮಾಡಿದ್ದೇವೆ | ಸಚಿವ ಸೋಮಣ್ಣ - Mahanayaka
4:30 AM Thursday 13 - February 2025

ಶವ ಸುಡಲು 4 ಎಕರೆ ಸ್ಥಳಾವಕಾಶದ ವ್ಯವಸ್ಥೆ ಮಾಡಿದ್ದೇವೆ | ಸಚಿವ ಸೋಮಣ್ಣ

v somanna
23/04/2021

ಕೊರೊನಾ: ರಾಜಧಾನಿ ಬೆಂಗಳೂರಿನಲ್ಲಿ ಎಲ್ಲವೂ ಒಂದು ಹಂತಕ್ಕೆ ಬಂದು ನಿಂತಿದೆ. ಶವಸಂಸ್ಕಾರಕ್ಕೆ ಸರ್ಕಾರ ವ್ಯವಸ್ಥೆ ಮಾಡಿದ್ದು, ನಾಲ್ಕು ಎಕರೆ ಜಾಗದಲ್ಲಿ ಶವ ಸುಡಲು ಸ್ಥಳಾವಕಾಶ ಮಾಡಲಾಗಿದೆ ಎಂದು ಸಚಿವ ಸೋಮಣ್ಣ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಮಾಜಿ ಸಿಎಂ ಸಿದ್ದರಾಮಯ್ಯನವರ ಆರೋಪಗಳಿಗೆ ಉತ್ತರಿಸಿದರು. ಏಕ ಕಾಲಕ್ಕೆ 50 ಶವಗಳನ್ನು ಸಂಸ್ಕಾರ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ನಮಗೆ ಸಾಮಾನ್ಯ ಜನರ ಜೀವ ಮುಖ್ಯ. ಸಿದ್ದರಾಮಯ್ಯ ವಾಸ್ತವಾಂಶ ತಿಳಿದುಕೊಂಡು ಮಾತಾಡಲಿ. ಏನೋ ಒಂದು ಹೇಳಬೇಕು, ಅದಕ್ಕೆ ಹೇಳುತ್ತಾರೆ. ಆದರೆ ಇಂಥ ಸಂದರ್ಭದಲ್ಲಿ ಎಲ್ಲರೂ ಒಟ್ಟಿಗೆ ಕೆಲಸ ಮಾಡಬೇಕು ಎಂದು ಹೇಳಿದರು.

ಸರ್ಕಾರ ಸರಿಯಾಗಿ ಕೋವಿಡ್ ಪರಿಸ್ಥಿತಿ ನಿರ್ವಹಿಸುತ್ತಿಲ್ಲ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಆದರೆ ಅವರು ಅಂದುಕೊಂಡ ಹಾಗೆ ನಾವಿಲ್ಲ, ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತೀಚಿನ ಸುದ್ದಿ