ಸಿದ್ದು ಡಿಕೆಶಿ ಇಬ್ಬರ ಕೈಯಲ್ಲೂ ಚೂರಿ ಇದೆ, ಚುಚ್ಚೋಕೆ ಕಾಯ್ತಾ ಇದಾರೆ: ಈಶ್ವರಪ್ಪ ವ್ಯಂಗ್ಯ

ಚಾಮರಾಜನಗರ: ರಾಹುಲ್ ಗಾಂಧಿ ಬಲವಂತದಿಂದ ಒಬ್ಬರಿಗೊಬ್ಬರು ಅಪ್ಪಿಕೊಂಡರು ಅಷ್ಟೇ ಆದರೆ ಇಬ್ಬರ ಕೈಯಲ್ಲೂ ಚಾಕು ಇದೆ ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಚಾಮರಾಜನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಬಲವಂತದಿಂದ ಅಪ್ಪಿಕೊಂಡ ಡಿಕೆಶಿ ಹಾಗೂ ಸಿದ್ದರಾಮಯ್ಯ ಕೈಯಲ್ಲಿ ಚಾಕು ಇದೆ, ಚುಚ್ಚೋದಕ್ಕೆ ಕಾಯ್ತಾ ಇದಾರೆ ಅಷ್ಟೇ, ಸಿದ್ದು ಸಿಎಂ ಎಂದು ಘೋಷಣೆ ಕೂಗಿದರೇ ಡಿಕೆಶಿ ಸಿಡಿಮಿಡಿಯಾಗುತ್ತಾರೆ, ಡಿಕೆಶಿ ಸಿಎಂ ಎಂದರೆ ಖುಷಿಯಾಗುತ್ತಾರೆ ಎಂದು ಕಾಂಗ್ರೆಸ್ ನಲ್ಲಿ ಎರಡು ಬಣಗಳಿದೆ ಎಂದು ಪರೋಕ್ಷವಾಗಿ ವ್ಯಂಗ್ಯ ಮಾಡಿದರು.
ಸಿದ್ದರಾಮಯ್ಯ ತಾವೊಬ್ಬರು ಮಾತ್ರ ಹಿಂದುಳಿದ, ದಲಿತರ ನಾಯಕ ಎಂದುಕೊಂಡಿದ್ದಾರೆ. ಆದರೆ, ದಲಿತ ಮುಖಂಡ ಪರಮೇಶ್ವರ್ ಅವರನ್ನು ಸೋಲಿಸಿದ್ದು ಯಾರು..? ಮುನಿಯಪ್ಪ ಅವರನ್ನು ಸೋಲಿಸಿದ್ದಿ ಸಿದ್ದರಾಮಯ್ಯ ಶಿಷ್ಯರೇ ಅಲ್ಲವೇ..? ಅವರ ಸೋಲಿಗೆ ಯಾರು ಕಾರಣ ಎಂದು ಹೇಳಲಿ..? ದಲಿತ ನಾಯಕರು, ಹಿಂದುಳಿದ ನಾಯಕರು ಸಿದ್ದರಾಮಯ್ಯ ಅವರನ್ನು ಸೋಲಿಸಲ ಕಾಯ್ತಾ ಇದಾರೆ, 224 ಕ್ಷೇತ್ರದಿಂದಲೂ ನಿಂತುಕೊಳ್ಳಬಹುದು ಎನ್ನುತ್ತಾರೆ ಯಾಕೆ ಅವರು ಚಾಮುಂಡೇಶ್ವರಿಯಿಂದ ಸ್ಪರ್ಧೆ ಮಾಡಲ್ಲ, ಬಾದಾಮಿಯಲ್ಲಿ ಏಕೆ ನಿಲ್ಲಲ್ಲ ಎಂದು ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ತಾವು ಹಿಂದುಳಿದ ವರ್ಗದ ಚಾಂಪಿಯನ್ ಅಂದುಕೊಳ್ಳುವ ಸಿದ್ದರಾಮಯ್ಯ ಅನೇಕ ಬಜೆಟ್ ಮಂಡಿಸಿದ್ದಾರೆ. ಬಿಜೆಪಿ ಅವಧಿಯಲ್ಲಿ ಬಜೆಟ್ ಗಾತ್ರ ಎಷ್ಟು..? ಹಿಂದುಳಿದ ವರ್ಗಕ್ಕೆ, ದಲಿತರಿಗೆ ಕೊಟ್ಟ ಅನುದಾನ ಎಷ್ಟು ಹಾಗೂ ಸಿದ್ದರಾಮಯ್ಯ ಕೊಟ್ಟ ಹಣ, ಬಜೆಟ್ ಗಾತ್ರ ಎಷ್ಟು ಎಂದು ಅಂಕಿಅಂಶದ ಮೂಲಕ ಬಹಿರಂಗವಾಗಿ ಹೇಳಲಿ, ಹೋದಲೆಲ್ಲಾ ಸುಳ್ಳು ಹೇಳಿಕೆ ಕೊಡುತ್ತಿದ್ದಾರೆ. 5 ವರ್ಷಗಳ ಕಾಲ ಸಿಎಂ ಆಗಿದ್ದೇ ಅವರಿಗೆ ಹೆಮ್ಮೆ ಮತ್ಯಾಕೆ ಸೋತರು..? ಅವರ ಮಂತ್ರಿಗಳು ಯಾಕೆ ಸೋತರು ಎಂದು ಲೇವಡಿ ಮಾಡಿದ್ದಾರೆ.
ಉಚಿತ ವಿದ್ಯುತ್, ಗೃಹಲಕ್ಷಿ ಹಣ ಎಂದು ಕಪಟ ಘೋಷಣೆಗಳನ್ನು ಮಾಡುತ್ತಿದ್ದಾರೆ. ಜನರು ಒಂದು ಬಾರಿ ಮರಳಾಗಬಹುದು, ಎರಡು ಬಾರಿ ಮರಳುಗಾಬಹುದು, ಆದರೆ ಪದೇ ಮರಳಾಗುವುದಿಲ್ಲ ಕಾಂಗ್ರೆಸ್ ಅಧಿಕಾರ ಹಿಡಿಯಲ್ಲ, ಈ ಬಿಜೆಪಿ ಸರ್ಕಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರದ ನಾಯಕರು ಹೇಳಿದ ಕಡೆ ಚುನಾವಣೆಗೆ ನಿಲ್ಲುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಕೋಲಾರದಲ್ಲಿ ನಿಂತ್ಕೋ ಅಂತಾ ಹೈಕಮಾಂಡ್ ಹೇಳಿದ್ಯಾ, ಬಾದಾಮಿಯಲ್ಲಿ ನಿಂತ್ಕೋಬೇಡ ಅಂತಾ ಹೇಳಿದ್ಯಾ, ಪ್ರಜಾಧ್ವನಿ ಯಾತ್ರೆ ವೇಳೆ ಅವರವರೇ ಟಿಕೆಟ್ ಘೋಷಣೆ ಮಾಡುತ್ತಿದ್ದಾರೆ ಸಂಸದೀಯ ಮಂಡಲಿ ಇರುವುದು ಏತಕ್ಕೆ..? ನನಗೆ ಆಶೀರ್ವಾದ ಮಾಡಿ ಎಂದು ಡಿಕೆಶಿ ಹೇಳಿಕೊಂಡು ಬರುತ್ತಿದ್ದಾರೆ, ಒಕ್ಕಲಿಗರು ಹುಟ್ಟಿರುವುದು ಬರೀ ಡಿಕೆಶಿ ಅವರನ್ನು ಸಿಎಂ ಮಾಡಲಿಕ್ಕೆ ಮಾತ್ರವೇ..? ಅವರು ಹಿಂದೆ ಏನು ಮಾಡಿದ್ದಾರೆ, ಮುಂದೆ ಏನು ಮಾಡುತ್ತಾರೆ ಎಂದು ಹೇಳಲಿ ಎಂದು ಕೈಪಡೆ ವಿರುದ್ಧ ಆಕ್ರೋಶ ಹೊರಹಾಕಿದರು.
ಬಾಹಿಯೋ ಬೆಹನ್ ಎಂದು ಕೈ ಅಲ್ಲಾಡಿಸುವ ಸಿದ್ದರಾಮಯ್ಯ ಮಿಮಿಕ್ರಿ ಕಲಾವಿದ ಆಗಬೇಕಿತ್ತು, 28ಕ್ಕೆ 28 ಸಂಸದ ಸ್ಥಾನ ಗೆಲ್ಲುತ್ತೇವೆ ಎಂದು ಬೀಗುತ್ತಿದ್ದರು ಅವರ ಹಣೆಬರಹಕ್ಕೆ 1 ಸೀಟ್ ಗೆದ್ದರು, ಮೈಕ್ ಹಾಕಿ ಕೂಗಿದರೂ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಜನರು ಬರುತ್ತಿಲ್ಲ ಎಂದು ಈಶ್ವರಪ್ಪ
ವ್ಯಂಗ್ಯ ಮಾಡಿದರು.
ಎರಡು ರಾಜ್ಯಗಳಲ್ಲಿ ನಮ್ಮದೇ ಅಧಿಕಾರ: ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶ ಕುರಿತು ಮಾತನಾಡಿ ನಾಗಲ್ಯಾಂಡ್ ಹಾಗೂ ತ್ರಿಪುರದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ, 3 ರಾಜ್ಯಗಳಲ್ಲೂ ಕಾಂಗ್ರೆಸ್ ನಿರ್ನಾಮ ಆಗಿದೆ, ಅದೇ ರೀತಿ ರಾಜ್ಯದಲ್ಲೂ ಆಗಲಿದೆ, ಒಂದು ಕಾಲದಲ್ಲಿ ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದ ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್ ಹೇಳಹೆಸರಿಲ್ಲದಂತಾಗಿದೆ ಎಂದರು.
ಮಂತ್ರಿ ಸ್ಥಾನ ಸಿಗದಿದ್ದಕ್ಕೆ ನಿರಾಶೆಯಿಲ್ಲ: ತನಗೆ ಮಂತ್ರಿ ಸ್ಥಾನ ಸಿಗಲಿಲ್ಲ ಎಂಬುದಕ್ಕೆ ನಾನೇನು ನಿರಾಶೆಗೊಂಡಿಲ್ಲ, ಕಾಲ ಬಂದಾಗ ಸ್ಥಾನಮಾನ ಸಿಗಲಿದೆ, ನಿರಾಶೆಗೊಳಗಾದವನು ರಾಜಕಾರಣಿಯೇ ಅಲ್ಲ ಎಂದು ಸಚಿವ ಸ್ಥಾನ ಸಿಗಲಿಲ್ಲವೆಂಬ ಪ್ರಶ್ನೆಗೆ ಉತ್ತರಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw
Disclaimer:
www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.