ನನ್ನ ಫೋಟೋ ಬಳಸಿ, ನನ್ನ ಪತಿಯನ್ನು ಕಾಮುಕ ಎಂದು ಬರೆದಿದ್ದಾರೆ: ಪಾಕ್ಷಿಕ ಪತ್ರಿಕೆ ವಿರುದ್ಧ ಮಹಿಳೆ ಆಕ್ರೋಶ
ಬೆಳ್ತಂಗಡಿ: ವೇಣೂರು ಗೋಳಿಯಂಗಡಿಯ ಮಜ್ಮಉ ಸ್ಸಆದ ಸಂಸ್ಥೆಯ ಹೆಸರಿಗೆ ಧಕ್ಕೆ ತಂದು ಮುಚ್ಚಿಸುವ ಹುನ್ನಾರದಿಂದ ಅಥವಾ ನಮ್ಮ ಏಳಿಗೆ ಸಹಿಸದೆ ಅಸೂಯೆಯಿಂದ ನಮ್ಮ ಫೋಟೋ ಬಳಸಿ ಇಲ್ಲಸಲ್ಲದ ಆಪಾದನೆ ಮಾಡಿ ಪಾಕ್ಷಿಕ ಪತ್ರಿಕೆಯಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ವರದಿ ಬಿತ್ತರಿಸಿದ್ದು, ಅದರ ವಿರುದ್ಧ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿರುವುದಾಗಿ ಸಿರಾಜುದ್ದೀನ್ ಝುಹುರಿ ಹಾಗೂ ಧರ್ಮಪತ್ನಿ ಸಂಸಿಯಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಳ್ತಂಗಡಿ ಸುವರ್ಣ ಆರ್ಕೆಡ್ನಲ್ಲಿ ಕರೆಯಲಾಗಿದ್ದ ಮಾಧ್ಯಮ ಗೋಷ್ಠಿಯಲ್ಲಿ ಅವರು ವಿವರಣೆ ನೀಡಿದರು.
ನಾನು ಬೆಳ್ತಂಗಡಿಯ ಖಾಸಗಿ ಕಾಲೇಜಿನಲ್ಲಿ ಪದವಿ ಓದುತ್ತಿದ್ದೇನೆ. ನಾನು ಮತ್ತು ನನ್ನ ಪತಿ ಅನ್ಯೋನ್ಯವಾಗಿ ಜೀವಿಸುತ್ತಿದ್ದೇವೆ. ಆದರೆ ನನ್ನ ಫೋಟೊವನ್ನು ಪತ್ರಿಕೆಯಲ್ಲಿ ಬಳಸಿ ಅಶ್ಲೀಲವಾಗಿ ಬರೆದಿರುವುದಲ್ಲದೆ ನನ್ನ ಪತಿಯನ್ನು ಕಾಮುಕ ಎಂಬುದಾಗಿ ನಿಂದಿಸಿರುತ್ತಾರೆ. ನನ್ನ ಪತಿ ನನ್ನನ್ನು ರಾತ್ರೋರಾತ್ರಿ ಕರೆದೊಯ್ದು ಮದುವೆಯಾಗಿರುತ್ತಾನೆ ಎಂಬುದಾಗಿ ಸುಳ್ಳು ವಾರ್ತೆಯನ್ನು ಬಿತ್ತರಿಸಿರುತ್ತಾರೆ. ಈ ಪತ್ರಿಕೆಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇದರಿಂದಾಗಿ ನನ್ನ ಮಾನಕ್ಕೆ ಹಾನಿಯಾಗಿರುತ್ತದೆ. ನಾನು ಒಬ್ಬಳು ಮಹಿಳೆ ಎನ್ನುವುದನ್ನು ಮರೆತು ನನ್ನ ಘನತೆಗೆ ದಕ್ಕೆ ತಂದಿರುತ್ತಾರೆ. ವಿದ್ಯಾರ್ಥಿನಿಯಾದ ನನ್ನ ಘನತೆಗೆ ಕುಂದುಂಟಾಗುವ ರೀತಿಯಲ್ಲಿ ಪೋಟೊವನ್ನು ಬಳಸಿ ಅಶ್ಲೀಲ ಬರಹಗಳನ್ನು ಬರೆದು ಪ್ರಕಟಿಸಿರುವುದರಿಂದ ನನ್ನ ವೈಯುಕ್ತಿಕ ಬದುಕಿಗೆ ಇದರಿಂದ ಘಾಸಿಯಾಗಿರುತ್ತದೆ
ಆದುದರಿಂದ ಇಂತಹಾ ವರದಿ ಪ್ರಕಟಿಸುವ ಮೂಲಕ ನನ್ನ ಘನತೆಗೆ ದಕ್ಕೆ ತಂದ ಪತ್ರಿಕೆ, ಅದರ ಸಂಪಾದಕರು, ಮುದ್ರಕರ ವಿರುದ್ಧ ಹಾಗೂ ಜಾಲತಾಣದಲ್ಲಿ ಅದನ್ನು ಹಂಚುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ನನಗೆ ನ್ಯಾಯ ದೊರಕಿಸಿಕೊಡಬೇಕು ಎಂದು ನಾನು ಈಗಾಗಲೇ ಎಸ್ ಪಿ ಅವರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದೇನೆ ಎಂದು ಸಿಂಸಿಯಾ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರ ಪತಿ ಸಿರಾಜುದ್ದೀನ್ ಝುಹುರಿ, ನಾನು ಒಂದೂವರೆ ವರ್ಷದಿಂದ ಧಾರ್ಮಿಕ ಲೌಖಿಕ ಸಮನ್ವಯ ಶಿಕ್ಷಣ ನೀಡುವ ಸಂಸ್ಥೆಯೊಂದನ್ನು ನಡೆಸುತ್ತಿದ್ದು ಅದರಲ್ಲಿ15 ರಿಂದ 20 ಮಕ್ಕಳು ಕಲಿಯುತ್ತಿದ್ದಾರೆ. ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅದರ ಏಳಿಗೆ ಸಹಿಸದೆ ಈ ರೀತಿ ಅಪಪ್ರಚಾರ ಆರಂಭಿಸಿದ್ದಾರೆ. ಅದಲ್ಲದೆ ಸಹಬಾಳ್ವೆ ಯಿಂದ ನಡೆಯುತ್ತಿರುವ ನಮ್ಮ ಕುಟುಂಬವನ್ನು ಒಡೆಯುವ ಹುನ್ನಾರ ಕೂಡ ಇದರ ಹಿಂದಿದೆ. ಹೆಣ್ಣಿನ ಗೌರವಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಸುಳ್ಳಾಪಾದನೆ ಮಾಡಿದ್ದಾರೆ. ಇದರಲ್ಲಿ ಹೈದರ್ ಹಾಜಿ ಮತ್ತು ಅಶ್ರಫ್ ಕಲ್ಲೇರಿ ಎಂಬವರ ಮೇಲೆ ನಮಗೆ ಬಲವಾದ ಸಂದೇಹವಿದ್ದು ಅವರ ಹೆಸರು ನಮೂದಿಸಿಯೇ ಪೊಲೀಸ್ ದೂರು ನೀಡಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka