ಮಾಸ್ತಿಯವರನ್ನು “ಮಸ್ತಿ” ಅಂದ ರಾಮುಲು | ಕುಮಾರವ್ಯಾಸರನ್ನು “ಕುಮಾರಸ್ವಾಮಿ” ಎಂದ ಸೋಮಣ್ಣ - Mahanayaka
3:12 PM Wednesday 20 - August 2025

ಮಾಸ್ತಿಯವರನ್ನು “ಮಸ್ತಿ” ಅಂದ ರಾಮುಲು | ಕುಮಾರವ್ಯಾಸರನ್ನು “ಕುಮಾರಸ್ವಾಮಿ” ಎಂದ ಸೋಮಣ್ಣ

01/11/2020


Provided by

ಚಿತ್ರದುರ್ಗ: ಕನ್ನಡ ಉಚ್ಛಾರಣೆ ತಪ್ಪು ತಪ್ಪಾಗಿ ಮಾಡುವ ಸಚಿವ ಶ್ರೀರಾಮುಲು ಅವರು ತಮ್ಮ ಎಡವಟ್ಟಿಗೆ ಆಗಾಗ ಸುದ್ದಿಯಾಗುತ್ತಾರೆ. ಈ ಬಾರಿ ಸಚಿವ ಸೋಮಣ್ಣ ಅವರೂ ಈ ಸಾಲಿಗೆ ಸೇರಿಕೊಂಡಿದ್ದಾರೆ.


ಚಿತ್ರದುರ್ಗದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಮಾಸ್ತಿ ಅವರ ಹೆಸರನ್ನು ಮಸ್ತಿ ಎಂದು ಹೇಳಿದರು. ಇನ್ನೂ ಮಡಿಕೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಸೋಮಣ್ಣ ಅವರು, ಕುಮಾರವ್ಯಾಸರನ್ನು ಕುಮಾರಸ್ವಾಮಿ ಎಂದು ಹೇಳಿಬಿಟ್ಟರು.


ಶ್ರೀರಾಮುಲು ಅವರು ಕನ್ನಡ ಸರಿಯಾಗಿ ಗೊತ್ತಿಲ್ಲದಿದ್ದರೂ ಕನ್ನಡ ಮಾತನಾಡುತ್ತಿದ್ದಾರೆ. ಅದು ಬಹಳ ಸಂತಸದ ವಿಷಯವೇ ಆಗಿದೆ. ಬಹಿರಂಗ ಕಾರ್ಯಕ್ರಮಗಳಲ್ಲಿ ಉಚ್ಛಾರಣೆ ದೋಷ ಇವೆಲ್ಲ ಸಾಮಾನ್ಯವೇ ಆಗಿದೆ. ಆದರೆ ಕನ್ನಡ ಕಬ್ಬಿಣದ ಕಡಲೆಕಾಯಿ ಅಂತೂ ಖಂಡಿತಾ ಅಲ್ಲ, ರಾಮುಲು ಅವರು ಸ್ಪಷ್ಟ ಕನ್ನಡದಲ್ಲಿ ಮಾತನಾಡುವ ಕಾಲ ಬರಬಹುದು ಎಂದು ಕಾಯೋಣ ಅಲ್ಲವೇ?


ಇತ್ತೀಚಿನ ಸುದ್ದಿ