ಕ್ರೈಸ್ತ ಧರ್ಮ ಗುರುವಿನ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿ - Mahanayaka

ಕ್ರೈಸ್ತ ಧರ್ಮ ಗುರುವಿನ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿ

01/11/2020

ಫ್ರಾನ್ಸ್: ಕ್ರೈಸ್ತ ಧರ್ಮಗುರು ಅವರ ಮೇಲೆ ದುಷ್ಕರ್ಮಿಯೋರ್ವ ಎರಡು ಬಾರಿ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿರುವ ಘಟನೆ ಫ್ರಾನ್ಸ್ ನ ಲಿಯೋನ್ ನಗರದಲ್ಲಿ ನಡೆದಿದ್ದು, ಧರ್ಮಗುರುವಿನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.


ಧರ್ಮಗುರು ಚರ್ಚ್ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಯೋರ್ವ ಗುಂಡು ಹಾರಿಸಿ, ಸ್ಥಳದಿಂದ ಪರಾರಿಯಾಗಿದ್ದಾನೆ. ಗುಂಡು ತಗಲಿದ ಪರಿಣಾಮ ಧರ್ಮಗುರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.


ಫ್ರಾನ್ಸ್ ನ ಇನ್ನೊಂದು ನಗರದಲ್ಲಿ ಎರಡು ದಿನಗಳ ಹಿಂದೆಯಷ್ಟೇ ಚೂರಿ ಇರಿತ ನಡೆದಿತ್ತು. ಇದರಲ್ಲಿ 3 ಜನರು ಸಾವನ್ನಪ್ಪಿದ್ದರು. ಈ ಘಟನೆಯ ಬೆನ್ನಲ್ಲೇ ಇದೀಗ ಮತ್ತೊಂದು ಘಟನೆ ನಡೆದಿದೆ.Provided by

ಇತ್ತೀಚಿನ ಸುದ್ದಿ