ಟ್ರಾನ್ಸ್ ಜೇಂಡರನ್ನು ವಿವಾಹವಾಗಲು ಮುಂದಾದ ಮಗ: ಹೆತ್ತವರು ಆತ್ಮಹತ್ಯೆ
ಮಗ ಟ್ರಾನ್ಸ್ ಜೇಂಡರ್ ಅನ್ನು ವಿವಾಹವಾಗಲು ತೀರ್ಮಾನಿಸಿರುವುದನ್ನು ಕಂಡು ತೀವ್ರ ಆಘಾತಕ್ಕೆ ಒಳಗಾದ ಹೆತ್ತವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಸ್ಥಳೀಯ ಟ್ರಾನ್ಸ್ ಜೇಂಡರ್ ಸಮುದಾಯದೊಂದಿಗೆ ಸೇರಿ ಚಟುವಟಿಕೆಯಲ್ಲಿದ್ದ ಮಗ ಸುನಿಲ್ ಕುಮಾರ್ ನ ತೀರ್ಮಾನವನ್ನು ಸಹಿಸಲಾಗದೆ 45 ವರ್ಷದ ಸುಬ್ಬು ರಾಯುಡು ಮತ್ತು 38 ವರ್ಷದ ಸರಸ್ವತಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂರು ವರ್ಷಗಳಿಂದ ಸುನಿಲ್ ಕುಮಾರ್ ಟ್ರಾನ್ಸ್ ಜೇಂಡರ್ ಜೊತೆ ಪ್ರಣಯದಲ್ಲಿದ್ದ. ತಾನು ಮಹಿಳೆಯನ್ನು ವಿವಾಹ ಆಗಲಾರೆ ಎಂದು ಹೇಳಿದ್ದ. ಹೆತ್ತವರು ಎಷ್ಟೇ ಒತ್ತಾಯಿಸಿದರೂ ಆತ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಈ ವಿಷಯದಲ್ಲಿ ಹೆತ್ತವರು ಮತ್ತು ಈ ಸುನಿಲ್ ಕುಮಾರ್ ಜೊತೆ ಚರ್ಚೆ ವಾಗ್ವಾದ ನಡೀತಾ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರಣದಿಂದ ಈ ಸುನಿಲ್ ಕುಮಾರ್ ಈ ಹಿಂದೆ ಆತ್ಮಹತ್ಯೆಗೂ ಯತ್ನಿಸಿದ್ದ. ಟ್ರಾನ್ಸ್ ಜೆ0ಡರ್ ನಿಂದ ಈ ಸುನಿಲ್ ಕುಮಾರ್ ಒಂದುವರೆ ಲಕ್ಷ ರೂಪಾಯಿಯನ್ನು ಪಡೆದಿದ್ದು ಅದನ್ನು ಅವರಿಗೆ ಮರಳಿಸುವುದಕ್ಕಾಗಿ ಹೆತ್ತವರ ಮೇಲೆ ಒತ್ತಡ ಹಾಕುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೆ ಯೇ ಈ ಟ್ರಾನ್ಸ್ ಜೆಂಡ ರ್ ಗಳು ಈ ಸುನಿಲ್ ಕುಮಾರ್ ನ ಹೆತ್ತವರನ್ನು ಬಹಿರಂಗವಾಗಿ ಅವಮಾನಿಸಿದ್ದು ಕೂಡ ಇವರ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj