“ಕ್ರೀಡೆಯಿಂದ ಜೀವನದಲ್ಲಿ ಉತ್ಸಾಹ ಸಾಧ್ಯ”: ಜೇಮ್ಸ್ ಕುಟಿನ್ಹೊ - Mahanayaka
10:19 AM Sunday 15 - December 2024

“ಕ್ರೀಡೆಯಿಂದ ಜೀವನದಲ್ಲಿ ಉತ್ಸಾಹ ಸಾಧ್ಯ”: ಜೇಮ್ಸ್ ಕುಟಿನ್ಹೊ

surathkal
02/10/2024

ಸುರತ್ಕಲ್: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ಉತ್ತರ ವಲಯ ಹಾಗೂ ಸರಕಾರಿ ಪ್ರೌಢಶಾಲೆ ಜೋಕಟ್ಟೆ ಇವರ ಆಶ್ರಯದಲ್ಲಿ ಸುರತ್ಕಲ್ ಹೋಬಳಿ ಮಟ್ಟದ ಪ್ರೌಢಶಾಲೆ ಬಾಲಕ ಬಾಲಕಿಯರ ಕ್ರೀಡಾಕೂಟ ಬುಧವಾರ ಇಲ್ಲಿನ ಎನ್ ಐಟಿಕೆ ಮೈದಾನದಲ್ಲಿ ಜರುಗಿತು.

ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಜೇಮ್ಸ್ ಕುಟಿನ್ಹೊ, ಕ್ರೀಡೆಯಿಂದ ಜೀವನದಲ್ಲಿ ಉಲ್ಲಾಸ ಮತ್ತು ಉತ್ಸಾಹ ಹೆಚ್ಚಾಗುತ್ತದೆ, ಕ್ರೀಡೆಯಿಂದ ಮಕ್ಕಳ ಮನಸ್ಸು ಸದೃಢವಾಗಿರುತ್ತದೆ. ಇದು ಓದುವಿಕೆ ಮತ್ತು ಜ್ಞಾನ ಹೆಚ್ಚಳಕ್ಕೆ ಪೂರಕವಾಗಿರುತ್ತದೆ.ಸ್ಪರ್ಧಾ ಮನೋಭಾವನೆ ಇರಬೇಕು ಎಂದು ಶಿಕ್ಷಕರು ಮಕ್ಕಳಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕು“ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು SDMC ಅಧ್ಯಕ್ಷರಾದ ಅಬೂಬಕ್ಕರ್ ಕಳವಾರ್ ವಹಿಸಿದ್ದರು. ವೇದಿಕೆಯಲ್ಲಿ ಮಂಗಳೂರು ಉತ್ತರ ವಲಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭರತ್ ಕೆ. ಸಾಹಿತಿ ಹಾಗೂ ಶಾಲಾಭಿಮಾನಿ ಅಲಿಯಬ್ಬ, ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಂಶುದ್ದಿನ್, ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿ ವಿನೋದ್ ಕುಮಾರ್, CRP ಕರಂಬಾರು ಕ್ಲಸ್ಟರ್ ಹೇಮಂತ್, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮಂಗಳೂರು ತಾಲೂಕು ಅಧ್ಯಕ್ಷ ನಿತಿನ್ ಪುತ್ರನ್, ಮಂಗಳೂರು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಗ್ರೇಡ್ –1, ಅಧ್ಯಕ್ಷರು ಚೆಲುವಮ್ಮ, SDMC ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ರಹೀಮ್, SDMC ಸದಸ್ಯ ಶರೀಫ್ ಜೋಕಟ್ಟೆ, ಆದಂ, ಪ್ರಯೋಜಕರು. ಶ್ರೀ ದೇವಿಕಿರಣ್ ಕಾಂಟ್ರಾಕ್ಟರ್, ಅಗ್ನೆಸ್ ಡೊಟ್ಟಿ ಪಿಂಟೊ, BRP ಪ್ರಾಥಮಿಕ, ಹಳೆ ವಿದ್ಯಾರ್ಥಿ ಸಂಘ ಕರಂಬಾರು ಉಪಾಧ್ಯಕ್ಷ ರಾಕೇಶ್ ಕುಂದರ್, ಸರಕಾರಿ ಪ್ರೌಢಶಾಲೆ ಜೋಕಟ್ಟೆ ಮುಖ್ಯ ಶಿಕ್ಷಕ ಅಬ್ದುಲ್ ಖಾದರ್, ಸರಕಾರಿ ಪ್ರೌಢ ಶಾಲೆ ಜೋಕಟ್ಟೆ ದೈಹಿಕ ಶಿಕ್ಷಣ ಶಿಕ್ಷಕಿ ಆಶಾ. ಟಿ ಇದ್ದರು.

ಶಾಲಾ ಮುಖ್ಯ ಶಿಕ್ಷಕ ಅಬ್ದುಲ್ ಖಾದರ್ ಸ್ವಾಗತಿಸಿದರು, ಸವಿತಾ ನಾಯಕ್ ನಿರೂಪಿಸಿದರು, ಪದ್ಮಿನಿ ಕೋಟ್ಯಾನ್ ವಂದಿಸಿದರು, ಶಾಲಾ ನಾಯಕಿ ಕುಮಾರಿ ಆಯಿಷಾ ರುಮೈಷಾ ಪ್ರತಿಜ್ಞೆ ಭೋದಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ