ನೇರ ಸಂದರ್ಶನ: ಎಸೆಸೆಲ್ಸಿ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿದವರಿಗೆ ಉದ್ಯೋಗಾವಕಾಶಗಳು - Mahanayaka

ನೇರ ಸಂದರ್ಶನ: ಎಸೆಸೆಲ್ಸಿ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿದವರಿಗೆ ಉದ್ಯೋಗಾವಕಾಶಗಳು

employment
17/04/2021

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ನಿಯಂತ್ರಣ ಮೀರುತ್ತಿರುವ ನಡುವೆಯೇ ಬಿಬಿಎಂಪಿಯು ವೈದ್ಯರು ಹಾಗೂ ನರ್ಸ್, ಸ್ವಾಬ್ ಕಲೆಕ್ಟರ್ಸ್ ನೇಮಕಕ್ಕೆ ಮುಂದಾಗಿದೆ.

3 ತಿಂಗಳ ಅವಧಿಗೆ ನೇಮಕಕ್ಕೆ ನೋಟಿಫಿಕೇಶನ್ ಹೊರಡಿಸಿರುವ ಬಿಬಿಎಂಪಿ, ನೇರ ಸಂದರ್ಶನಕ್ಕೆ ಆಹ್ವಾನಿಸಿದೆ. ಏಪ್ರಿಲ್ 19ರಿಂದ  ಏಪ್ರಿಲ್ 21ರವರೆಗೆ ಬೆಂಗಳೂರು ದಕ್ಷಿಣ ವಲಯ ಜಯನಗರ ವಲಯವಾರು ಬಿಬಿಎಂಪಿ ಕಚೇರಿಯಲ್ಲಿ ಬೆಳಿಗ್ಗೆ 11ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ.

*ಭಾರತೀಯ ಮೆಡಿಕಲ್ ಕೌನ್ಸಿಲ್ ಮಾನ್ಯತೆ ಪಡೆದ MBBS ವೈದ್ಯರು ಬೇಕಾಗಿದ್ದಾರೆ- ಇವರ ವೇತನ 80 ಸಾವಿರ ರೂಪಾಯಿಗಳು

*ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದ BDS ವೈದ್ಯರು ಬೇಕಾಗಿದ್ದಾರೆ- ಇವರ ವೇತನ 60 ಸಾವಿರ ರೂಪಾಯಿಗಳು

*ಮಾನ್ಯತೆ ಪಡೆದ ಆಯುರ್ವೇದ ಯುನಿವರ್ಸಿಟಿಯಿಂದ BAMS Or BUMS Or BSMS Or MSMH ಡಿಗ್ರಿ ಆಗಿರುವ ಆಯುಷ್ ವೈದ್ಯರು ಬೇಕಾಗಿದ್ದಾರೆ. ಇವರ ವೇತನ 60 ಸಾವಿರ ರೂಪಾಯಿಗಳು.

*ಲಸಿಕೆ ನೀಡಲು ಸ್ಟಾಫ್ ನರ್ಸ್ ಗಳು ಬೇಕಾಗಿದ್ದು, ಮಾನ್ಯತೆ ಪಡೆದ ನರ್ಸಿಂಗ್ ಕೌನ್ಸಿಲ್ ನಲ್ಲಿ BSc/ GNM/diploma ನೋಂದಾಯಿಸಿರಬೇಕು. ಇವರ ವೇತನ 20 ಸಾವಿರ ರೂಪಾಯಿಗಳು.

*ಸ್ವಾಬ್ ಕಲೆಕ್ಟರ್ಸ್ ಬೇಕಾಗಿದ್ದು, ಇವರು ಕನಿಷ್ಟ 10ನೇ ತರಗತಿ ಪಾಸ್ ಆಗಿರಬೇಕು. ಇವರ ವೇತನ 10 ಸಾವಿರ ರೂಪಾಯಿಗಳು.

ಮೇಲಿನ ಎಲ್ಲ ಹುದ್ದೆಗಳಿಗೆ ಸಂದರ್ಶನದಲ್ಲಿ ಭಾಗಿಯಾಗುವವರಿಗೆ 50 ವರ್ಷ ದಾಟಿರಬಾರದು. ಕನ್ನಡ ಮಾತನಾಡಲು, ಓದಲು, ಬರೆಯಲು ಗೊತ್ತಿರಬೇಕು. ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳನ್ನು ಪಡೆಯಲು ಸಂದರ್ಶನದಲ್ಲಿ ಭಾಗವಹಿಸಬಹುದು.

ಇತ್ತೀಚಿನ ಸುದ್ದಿ