ಎಸ್ ಬಿಐನಲ್ಲಿ 452 ವಿವಿಧ  ಹುದ್ದೆಗಳು | 51 ಸಾವಿರ ರೂ. ಮಾಸಿಕ ವೇತನ - Mahanayaka

ಎಸ್ ಬಿಐನಲ್ಲಿ 452 ವಿವಿಧ  ಹುದ್ದೆಗಳು | 51 ಸಾವಿರ ರೂ. ಮಾಸಿಕ ವೇತನ

27/12/2020

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿವಿಧ 452 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆ ಹಾಗೂ ಅನುಭವದ ಆಧಾರದ ಮೇಲೆ 51,490ರ ತನಕ ಮಾಸಿಕ ವೇತನ ನೀಡಲಾಗುವುದು ಎಂದು ಎಸ್ ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ವ್ಯವಸ್ಥಾಪಕ, ಸಹಾಯಕ ವ್ಯವಸ್ಥಾಪಕ  ಹಾಗೂ ಐಟಿ ಸೆಕ್ಯುರಿಟಿ ವಿಭಾಗದಲ್ಲಿ ನುರಿತ ಅಧಿಕಾರಿಗಳಿಗೆ ಅವಕಾಶವಿದೆ.  ಎಂಬಿಎ ಮತ್ತು ಎಂಜಿನಿಯರಿಂಗ್ ಸೇರಿದಂತೆ ವಿವಿಧ ವಿಷಯಗಳ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.


ADS

12 ವ್ಯವಸ್ಥಾಪಕ ಹುದ್ದೆಗಳು  ಮತ್ತು 26  ಉಪ ವ್ಯವಸ್ಥಾಪಕ(ಮಾರ್ಕೆಟಿಂಗ್ ) ಹುದ್ದೆಗದ್ದು, ಎಂಬಿಎ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ಚೆನ್ನಾಗಿ ಮಾತನಾಡಲು ಬಲ್ಲವರಿಗೆ  ಮೊದಲ ಆದ್ಯತೆ ನೀಡಲಾಗುತ್ತದೆ. ಇನ್ನೂ ಸಹಾಯಕ ವ್ಯವಸ್ಥಾಪಕ ಹುದ್ದೆಗಳು 183 ಖಾಲಿ ಇದ್ದು, ಸಿಎಸ್,  ಐಟಿ, ಇಸಿಇ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪಡೆದವರು ಮತ್ತು ಐಟಿ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಎಂ.ಎಸ್ ಸಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ.

ಒಟ್ಟು 15 ವಿಭಾಗಗಳಲ್ಲಿ ವಿವಿಧ ಹುದ್ದೆಗಳು ಖಾಲಿಯಿದ್ದು, ಆಸಕ್ತರು ಈ ಬಗ್ಗೆ ಎಸ್ ಬಿ ಐನ ಅಧಿಕೃತ ವೆಬ್ ಸೈಟ್ https://www.sbi.co.in/web/careers ಗೆ ಭೇಟಿ ನೀಡಬಹುದಾಗಿದೆ. ಅರ್ಜಿಸಲ್ಲಿಸಲು ಜನವರಿ 11 ಕೊನೆಯ ದಿನಾಂಕ.

ಇತ್ತೀಚಿನ ಸುದ್ದಿ