ಸ್ವಚ್ಚತೆ ಕಡೆಗೆ ಒಂದು ಹೆಜ್ಜೆ ಕಾರ್ಯಕ್ರಮಕ್ಕೆ ನಗರಸಭೆ ಅಧ್ಯಕ್ಷರಿಂದ ಚಾಲನೆ
ಚಾಮರಾಜನಗರ: ನಗರದ 8ನೇ ವಾರ್ಡ್ ನಲ್ಲಿ ಸ್ವಚ್ಚತೆ ಕಡೆಗೆ ಒಂದು ಹೆಜ್ಜೆ ಕಾರ್ಯಕ್ರಮಕ್ಕೆ ನಗರಸಭಾ ಅಧ್ಯಕ್ಷರಾದ ಆಶಾನಟರಾಜು ಚಾಲನೆ ನೀಡಿದರು.
ನಗರದ ಹಲವು ಕಡೆ ರಾಶಿರಾಶಿಯಾಗಿ ಕಸ ಬಿದ್ದು ಕಪ್ಪುಪ್ರದೇಶವಾಗಿ ಗುರುತಿಸಿರುವ ಜಾಗದಲ್ಲಿ ನಗರಸಭೆ ವತಿಯಿಂದ ಕಸ ತೆರವುಗೊಳಿಸಿ ರಂಗೋಲೆ ಹಾಕಿ, ದೀಪ ಹಚ್ಚುವ ಮೂಲಕ ಸ್ವಚ್ಚತೆ ಮಾಡಲಾಗುತ್ತದೆ. ನಗರದಲ್ಲಿ ಎಲ್ಲೆಂದರಲ್ಲಿ ಜನತೆ ಕಸಹಾಕದೇ ಮನೆಮನೆಗಳ ಮುಂದೆ ಬರುವ ವಾಹನಗಳಿಗೆ ಕಸ ಹಾಕುವ ಮೂಲಕ ಚೆಲುವ ಚಾಮರಾಜನಗರವನ್ನು ಸ್ವಚ್ಚತ ಚಾಮರಾಜನಗರವನ್ನಾಗಿ ಮಾಡಲು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಪೌರಾಯುಕ್ತರಾದ ಎಸ್. ವಿ.ರಾಮದಾಸ್ ಮಾತನಾಡಿ, ನಗರಸಭೆ ವತಿಯಿಂದ ನಗರಸಭಾ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಕಸ ಹೆಚ್ಚಾಗುತ್ತದೆ ಅಂತಹ ಜಾಗಗಳನ್ನು ಕಪ್ಪು ಪ್ರದೇಶವನ್ನಾಗಿ ಗುರುತಿಸಿ ಸ್ವಚ್ಚತೆಗೊಳಿಸಲಾಗುತ್ತದೆ. ಈಗಾಗಲೇ ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಪಕ್ಕದಲ್ಲಿ ರಾಶಿರಾಶಿ ಕಸಬಿದ್ದು ಗಬ್ಬುನಾರುತ್ತಿದ್ದ ಸ್ಥಳವನ್ನು ಕಪ್ಪುಪ್ರದೇಶವಾಗಿ ಗುರುತಿಸಿ ಕಸ ತೆರವುಗೊಳಿಸಿ ಗೋಡೆ ಬರಹಗಳ ಮೂಲಕ ಸ್ವಚ್ಚತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಆಗಿದೆ. ಇಲ್ಲೂ ಕೂಡ ದಿನ ಬೆಳಗಾದರೆ ತುಂಬಾನೆ ಕಸವನ್ನು ಹಾಕುತ್ತಿದ್ದರು. ನಗರಸಭೆ ವತಿಯಿಂದ ಕಸವನ್ನು ತೆರಗೊಳಿಸಿ ಇಲ್ಲಿ ರಂಗೋಲೆ ಬಿಟ್ಟು ದೀಪ ಹಚ್ಚಿ ಇಲ್ಲಿ ಯಾರೂಕೂಡ ಕಸ ಹಾಕಬಾರದು ಎಂದು ವರ್ತಕರು, ಬೀದಿಬದಿ ವ್ಯಾಪಾರಿಗಳು ಹಾಗೂ ಸಾರ್ವಜನಿಕರಲ್ಲಿ ಅರಿವು ಉಂಟು ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಚೆಸ್ಕಾಂ ಎಇಇ ಸಿ.ಎನ್.ಪ್ರವೀಣ್‌ಕುಮಾರ್, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರಾದ ಗಿರಿಜಮ್ಮ, ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್, ಸಿಬ್ಬಂದಿಗಳಾದ ಸಿ.ಡಿ.ವೆಂಕಟೇಶ್, ಚೇತನ್, ಮಣಿಕಂಠ, ಪೌರಕಾರ್ಮಿಕರು, ವರ್ತಕರು, ಬೀದಿ ವ್ಯಾಪಾರಿಗಳು ಹಾಜರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka