ಹುಟ್ಟುಹಬ್ಬದ ದಿನವೇ 3ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಸಾವು - Mahanayaka

ಹುಟ್ಟುಹಬ್ಬದ ದಿನವೇ 3ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಸಾವು

nilay
06/01/2025

ಬೆಂಗಳೂರು: ಹುಟ್ಟುಹಬ್ಬದ ದಿನವೇ ಯುವಕನೊಬ್ಬ  ಹಾಸ್ಟೆಲ್ ನ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಮೈಕೋಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಐಐಎಂ ಸ್ನಾತಕೋತ್ತರ ವಿದ್ಯಾರ್ಥಿ ಗುಜರಾತ್ ಮೂಲದ ನಿಲಯ್ ಕೈಲಾಶ್ ಪಟೇಲ್(28) ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.  ಬನ್ನೇರುಘಟ್ಟ ರಸ್ತೆಯಲ್ಲಿರುವ ಐಐಎಂನಲ್ಲಿ 2ನೇ ವರ್ಷದ ಎಂಬಿಎ ವ್ಯಾಸಂಗ ಮಾಡುತ್ತಿದ್ದ ಈತ ಕ್ಯಾಂಪಸ್ ಹಾಸ್ಟೆಲ್ ನ ಎಫ್ ಕ್ಲಾಕ್ ನಲ್ಲಿ ಉಳಿದುಕೊಂಡಿದ್ದ.

ಶನಿವಾರ ನಿಲಯ್ ನ ಹುಟ್ಟು ಹಬ್ಬವಿತ್ತು. ಸ್ನೇಹಿತರ ಜೊತೆಗೆ ಹೊರಗೆ ಹೋಗಿ ಬಳಿಕ ಹಾಸ್ಟೆಲ್ ಗೆ ಹಿಂದಿರುಗಿದ್ದ. ರಾತ್ರಿ ಹಾಸ್ಟೆಲ್ ನ ಬೇರೆ ಬ್ಲಾಕ್ ನಲ್ಲಿರುವ ಸ್ನೇಹಿತರ ಕೊಠಡಿಯಲ್ಲಿ ಹುಟ್ಟು ಹಬ್ಬ ಆಚರಿಸಿದ್ದ. ರಾತ್ರಿ 11:30ರ ಸುಮಾರಿಗೆ ತನ್ನ ಬ್ಲಾಕ್ ಗೆ ಹಿಂದಿರುಗುವ ವೇಳೆ ಕಾಲು ಜಾರಿ 3ನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ. ಆದರೆ ಇದು ಯಾರ ಗಮನಕ್ಕೂ ಬಂದಿರಲಿಲ್ಲ.

ನಿನ್ನೆ ಬೆಳಗ್ಗೆ ಹಾಸ್ಟೆಲ್ ಸೆಕ್ಯೂರಿಟಿ ಗಾರ್ಡ್ ಗಮನಿಸಿ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ನಿಲಯ್ ನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಸದ್ಯ ಅಸಹಜ ಸಾವು ಎಂದು ಮೈಕೋಲೇಔಟ್ ಪೊಲೀಸರು  ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಇನ್ನಷ್ಟು ವಿಚಾರಗಳು ತಿಳಿದು ಬರಬೇಕಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/Ci8F6ckDmAbCBQyqgLqOPx

ಇತ್ತೀಚಿನ ಸುದ್ದಿ